ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಗ್ಗೆ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ರಾಷ್ಟ್ರಧ್ವಜಾರೋಹಣಗೈದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಪಾಟಾಳಿ ವೈ, ನವಜೀವನ ಶಾಲೆಯ ಸ್ಟೂಡೆಂಟ್ ಪೊಲೀಸ್ ಘಟಕದ ಅಧ್ಯಾಪಕ ವಿಜಯನ್ ಮಾಸ್ತರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇವೇಳೆ ನಿವೃತ್ತ ಸೈನಿಕ ಜೋಸ್ ಕೆ.ಟಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬಿ., ಬಿ.ಎಂ.ಐ.ಎ ಕೋಶಾಧಿಕಾರಿ ಬಿ.ಜ್ಞಾನದೇವ ಶೆಣೈ, ವನಿತಾವಿಂಗ್ ಅಧ್ಯಕ್ಷೆ ನಿರುಪಮಾ ಶೆಣೈ, ಯೂತ್‍ವಿಂಗ್ ಜಿಲ್ಲಾ ಸಮಿತಿ ಕಾರ್ಯಕಾರಿ ಸದಸ್ಯ ಮುಹಮ್ಮದ್ ಸಾಹಿದ್, ಉಪಾಧ್ಯಕ್ಷರುಗಳಾದ ರಾಜು ಸ್ಟೀಫನ್ ಕ್ರಾಸ್ತ, ಅಬ್ದುಲ್ ಹಮೀದ್, ಜೊತೆಕಾರ್ಯದರ್ಶಿ ಉದಯಶಂಕರ ಶುಭಹಾರೈಸಿರು. ಕಾರ್ಯದರ್ಶಿ ನರೇಂದ್ರ ಬಿ.ಎನ್. ಸ್ವಾಗತಿಸಿ, ಜೊತೆಕಾರ್ಯದರ್ಶಿ ರವಿ ನವಶಕ್ತಿ ವಂದಿಸಿದರು.
ಬದಿಯಡ್ಕದಲ್ಲಿ ವ್ಯಾಪಾರಿಗಳಿಂದ ಅಮೃತ ಮಹೋತ್ಸವ ಆಚರಣೆ; ಸನ್ಮಾನ
0
ಆಗಸ್ಟ್ 21, 2022