ಲಕ್ನೊ: ಹತ್ರಾಸ್ ನಲ್ಲಿ ದಲಿತ ಮಹಿಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)(UAPA) ಅಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ (Siddique Kappan) ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿ ಕೃಷ್ಣ ಪಹಲ್ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.
ಅಕ್ಟೋಬರ್ 2021 ರಲ್ಲಿ ದಲಿತ ಮಹಿಳೆಯ ಹತ್ಯೆಯ ನಂತರ ಹತ್ರಾಸ್‌ಗೆ ಹೋಗುತ್ತಿದ್ದ ದಿಲ್ಲಿ ಮೂಲದ ಪತ್ರಕರ್ತ ಕಪ್ಪನ್ ಅವರನ್ನು ಬಂಧಿಸಲಾಯಿತು. ಯುಎಪಿಎ ಅಡಿಯಲ್ಲಿ ಹಾಗೂ ದೇಶದ್ರೋಹದ ಆರೋಪದ ಮೇಲೆ ಕಪ್ಪನ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸದ್ಯ ಕಪ್ಪನ್ ಉತ್ತರ ಪ್ರದೇಶದ ಜೈಲಿನಲ್ಲಿದ್ದಾನೆ.
ವಿವರವಾದ ಆದೇಶವನ್ನು ಇನ್ನೂ ಪ್ರಕಟಿಸಬೇಕಾಗಿದೆ.