ಕುಂಬಳೆ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಪ್ರಯುಕ್ತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕುಂಬಳೆ ಮಂಡಲ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್ ಶಿಕ್ಷಕಿ ಸೂರಂಬೈಲು ನಿವಾಸಿ ಗಣೇಶ್ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಅವರ ಪುತ್ರಿ ನಿಕ್ಷಿತಾ ಶೆಟ್ಟಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರೆತ್ತಿರುವ ಸಲುವಾಗಿ ಹಾರ್ಧಿಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕುಂಬಳೆ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ಪ್ರಭು, ಬ್ಲಾಕ್ ಕಾರ್ಯದರ್ಶಿ ಲೋಕನಾಥ್ ಶೆಟ್ಟಿ ಉಜಾರು, ಕುಂಬಳೆಮಂಡಲ ಅಧ್ಯಕ್ಷ ರವಿ ಪೂಜಾರಿ, ಮಂಡಲ ಕೋಶಾಧಿಕಾರಿ ಡಾಲ್ಫಿ ಡಿಸೋಜ, ಮಂಡಲ ಕಾರ್ಯದರ್ಶಿ ರಮೇಶ್ ಗಾಂಧಿನಗರ, ಉಮೇಶ್ ಮಾಸ್ತರ್ ಮತ್ತು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ನಾಯಕ ಉಜಾರು ಪೃಥ್ವಿರಾಜ್ ಶೆಟ್ಟಿ ಸನ್ಮಾನ್ಯ ಕಾರ್ಯಕ್ರಮ ಕಾಂಗ್ರೆಸ್ ಪರವಾಗಿ ನೆರವೇರಿಸಿದರು.