ಕಾಸರಗೋಡು: ಕೂಡ್ಲು ಸಮೀಪದ ಬಾದಾರ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಂiÀiಲ್ಲಿ ನಾಗರಪಂಚಮಿ ಆಚರಿಸಲಾಯಿತು. ಶ್ರೀಸುಬ್ರಹ್ಮಣ್ಯ ಸ್ವಾಮಿಗೆ ವಿಷೇಶ ಪೂಜೆ ಬಳಿಕ ನಾಗ ದೇವರಿಗೆ ಪಂಚಾಮೃತ,ಹಾಲು, ಎಳನೀರಿನ ಅಭಿಷೇಕ ಹಾಗೂ ಸಾಮೂಹಿಕ ತಂಬಿಲ ಮತ್ತು ಮಹಾಪೂಜೆನಡೆಯಿತು. ಅರ್ಚಕ ಸುಬ್ರಾಯ ಕಾರಂತ ಅವರ ನೇತೃತ್ವ ಹಾಗೂ ಗೋಪಾಲಕೃಷ್ಣ ಕಾರಂತ ಅವರ ಸಹಕಾರದೊಂದಿಗೆ ಪೂಜಾ ವಿಧಿ ನೆರವೇರಿತು. ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್‍ಕೂಡ್ಲು, ಕಾರ್ಯದರ್ಶಿ ವಸಂತ, ಕೋಶಾಧಿಕಾರಿ ಸುರೇಶ್ ನಾಯ್ಕ್, ಸದಸ್ಯ ಶರತ್ ನಾಯ್ಕ್ ಹಾಗೂ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿಯುವಕ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕೂಡ್ಲು ಶೇಷವನ ಕ್ಷೇತ್ರದಲ್ಲಿ ನಾಗರಪಂಚಮಿ
0
ಆಗಸ್ಟ್ 04, 2022
Tags