ಮುಳ್ಳೇರಿಯ: ಹಠಾತ್ತನೆ ಬಂದೆರಗಿದ ಕೋವಿಡ್ ಮಹಾಮಾರಿಯ ಕಾರಣ ಜನಜೀವನದ ಮೇಲೆ ಬೀರಿದ ಪರಿಣಾಮಗಳೂ ಇನ್ನೂ ಮಾಸದಿರುವುದು ಕಳವಳಕ್ಕೆ ಕಾರಣವಾಗುತ್ತಿದೆ. ವ್ಯಾಕ್ಸಿನ್ ಲಭ್ಯವಾದ ಬಳಿಕ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದ್ದು ವ್ಯವಸ್ಥೆಗಳು ಸಹಜತೆಯತ್ತ ನಿಧಾನವಾಗಿ ಸಾಗಿದೆ. ಆದರೂ ಹಲವಷ್ಟು ವ್ಯವಸ್ಥೆಗಳು ಇನ್ನೂ ಸಂಪೂರ್ಣ ಲಾಕ್ ಆದ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವರಿದು ಸಾಮಾನ್ಯ ಜನರಿಗೆ ಸಮಸ್ಯೆ ನಿರಂತರವಾಗುತ್ತಿದೆ.
ಕಾಸರಗೋಡಿನಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾಸರಗೋಡು ಡಿಪೆÇೀ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಂಡಿರುವುದು ಈಗಲೂ ಪುನರಾರಂಭಗೊಳ್ಳದೆ ಕ್ಷೇತ್ರ ದರ್ಶನಕ್ಕೆ ತೆರಳುವ ಅನೇಕರಿಗೆ ಭಾರೀ ತೊಂದರೆಯಾಗಿರುವುದಾಗಿ ದೂರುಗಳು ಕೇಳಿಬಂದಿದೆ.
ಅಡೂರಿನಿಂದ ಮುಳ್ಳೇರಿಯ, ಬದಿಯಡ್ಕ, ಕುಂಬಳೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್‍ಗಳ ಸಂಚಾರವೂ ರದ್ದುಗೊಂಡಿದೆ.
ಈ ಎರಡು ಸ್ಥಳಗಳಿಗೆ ಬಸ್‍ಗೆ ದಿನನಿತ್ಯ ನೂರಾರು ಪ್ರಯಾಣಿಕರು ನಿತ್ಯ ಸಂಚರಿಸುವವರಾಗಿದ್ದು ಬಸ್ ಗಳು ಇನ್ನೂ ಪುನರಾರಂಭಗೊಳ್ಳದಿರುವುದರಿಂದ ಪರಿತಪಿಸುವಂತಾಗಿದೆ. ಮುಳ್ಳೇರಿಯ , ಅಡೂರು, ಕಿನ್ನಿಂಗಾರ್ ಭಾಗದ ಜನರು ಚಿಕಿತ್ಸೆಗಾಗಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು, ವ್ಯಾಪಾರಿಗಳಿಗೆ ಮಂಗಳೂರಿನ ಆಸ್ಪತ್ರೆಗಳು, ಶಾಲಾ ಕಾಲೇಜು, ಆಸ್ಪತ್ರೆಗಳಿಗೆ ತೆರಳುವವರಿಗೆ ಸಮಸ್ಯೆ ಕೋವಿಡ್ ಗಿಂತಲೂ ಭೀಕರವಾಗಿದೆ.
ಪ್ರಯಾಣಿಕರು ಸುಳ್ಯದ ಮೂಲಕ ಕುಕ್ಕೆ ಸುಬ್ರಮಣ್ಯ ಮುಂತಾದ ದೇವಸ್ಥಾನಗಳಿಗೆ ಸುಲಭವಾಗಿ ತಲುಪುತ್ತಿದ್ದರು. ಜೊತೆಗೆ ಗುತ್ತಿಗಾರು, ಪಂಜ, ನಿಂತಿಕಲ್ಲು ಮೊದಲಾದೆಡೆ ಅನೇಕ ವ್ಯಾಪಾರಿಗಳು, ಕೃಷಿ-ಕಾರ್ಮಿಕರು ಕಾಸರಗೋಡಿನಿಂತ ನಿತ್ಯ ತೆರಳುತ್ತಿದ್ದವರಿಗೆ ಬಸ್ ಗಳ ಸಂಚಾರ ಮೊಟಕಿನಿಂದ ಭಾರೀ ಕಷ್ಟ-ನಷ್ಟಗಳು ಉಂಟಾಗಿದ್ದು, ಅಧಿಕೃತರು ಸೇವೆಗಳು ಸ್ಥಗಿತಗೊಂಡಿರುವ ಈ ಎರಡು ಸೇವೆಗಳನ್ನು ಆದಷ್ಟು ಬೇಗ ಆರಂಭಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.