ತಿರುವನಂತಪುರ: ರಾಜ್ಯದ ಸಾರ್ವಜನಿಕ ಸಾಲ ಹೆಚ್ಚಿಲ್ಲ, ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತಿವೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ಕೇರಳ ಭಾರೀ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ವದಂತಿಗಳಿಗೆ ತೆರೆ ಬೀಳುತ್ತಿದೆ. ಆದರೆ ಸಾರ್ವಜನಿಕ ಸಾಲವು ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ ಎಂದು ಸಚಿವರು ವಿವರಿಸಿದರು. ಬಾಲಗೋಪಾಲ್ ಅವರು ಫೇಸ್ ಬುಕ್ ಮೂಲಕ ಪ್ರತಿಕ್ರಿಯೆ ನೀಡಿರುವರು.
ಸಾಲ ತೀರಾ ಹೆಚ್ಚಿಲ್ಲ. ದಿನಪತ್ರಿಕೆಯಲ್ಲಿ ಬರುವ ಸುದ್ದಿ ನೋಡಿದರೆ ಜನ ಹೆದರುತ್ತಾರೆ. ಕೇರಳದ ಆದಾಯವು ಹಿಂದಿನ ಬಾರಿಗಿಂತ ಹತ್ತು ಪಟ್ಟು ಹೆಚ್ಚಾಗಿದೆ. ಮಾಧ್ಯಮಗಳು ಅಂಕಿ-ಅಂಶಗಳನ್ನು ಉತ್ಪ್ರೇಕ್ಷಿಸುತ್ತಿವೆ ಎಂದು ಸಚಿವರು ಹೇಳಿದರು. ಹಿಂದಿನಂತೆ ಈಗ ಕೇರಳ ತೆಗೆದುಕೊಂಡಿರುವ ಸಾಲವು ಒಟ್ಟು ಆದಾಯದಿಂದ ಮರುಪಾವತಿ ಮಾಡಬಹುದಾದಷ್ಟು ಮಾತ್ರ ಮತ್ತು ಎಲ್ಲಾ ನಿಬರ್ಂಧಗಳಿಗೆ ಒಳಪಟ್ಟಿದೆ ಎಂದು ಅವರು ಹೇಳಿದರು.
ಜನರಲ್ಲಿ ಆತಂಕ ಉಂಟು ಮಾಡುವವರ ಗುರಿಯೇ ಬೇರೆ. ಕೇಂದ್ರ ಸಾಲವು ಒಟ್ಟು ಜಿಡಿಪಿಯ 69 ಪ್ರತಿಶತವಾಗಿದೆ. ಕೇರಳದ ಸಾಲವು ರಾಜ್ಯದ ಜಿಎಸ್‍ಡಿಪಿಯ ಶೇಕಡಾ 36 ಮಾತ್ರ ಎಂದಿರುವರು. ರಾಜ್ಯದ ಆದಾಯಕ್ಕೆ ಹೋಲಿಸಿದರೆ ಕಳೆದ ಎರಡು ದಶಕಗಳಲ್ಲಿ ಸಾಲದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಮಜಾಯಿಷಿ ನೀಡಿದ್ದಾರೆ.
ರಾಜ್ಯದ ಸಾರ್ವಜನಿಕ ಸಾಲ ಹೆಚ್ಚೇನೂ ಇಲ್ಲ: ಮಾಧ್ಯಮಗಳು ಸುಳ್ಳು ಪ್ರಚಾರವನ್ನು ಹರಡುತ್ತಿವೆ; ಆದಾಯ ಹತ್ತು ಪಟ್ಟು ಹೆಚ್ಚಿದೆ: ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್
0
ಆಗಸ್ಟ್ 04, 2022
Tags