ಪೆರ್ಲ: ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುತ್ತಿರುವ ಸಂಘಟನೆ ಅಮೃತದೀಪ ಪೆರ್ಲ ವತಿಯಿಂದ ಆ. 7ರಂದು ಬಜಕೂಡ್ಲು ಬಯಲಿನಲ್ಲಿ ನಡೆಯಲಿರುವ 'ಅಮೃತದೀಪ ಕೆಸರು ಗದ್ದೆ ಉತ್ಸವ-2022Áಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.
ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕುದ್ವ ಅವರು ಎಣ್ಮಕಜೆ ಗ್ರಾಪಂ ಸದಸ್ಯೆ ಉಷಾಗಣೇಶ್ ಅವರಿಗೆ ಆಮಂತ್ರಣಪತ್ರಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಅಮೃತದೀಪಂ ಸಂಚಾಲಕ, ಉದ್ಯಮಿ ಉದಯ ಚೆಟ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಸುವರ್ಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜತೆಕಾರ್ಯದರ್ಶಿ ಪ್ರಶಾಂತ್ ಟಿ.ಪೆರ್ಲ, ಕೋಶಾಧಿಕಾರಿ ವಿನೋದ್ ರೈ ಬಜಕೂಡ್ಲು ಉಪಸ್ಥಿತರಿದ್ದರು. ದೀಕ್ಷಿತ್ ಶೆಟ್ಟಿ ವಂದಿಸಿದರು. ಸಮಾಜದ ಅಶಕ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಸರುಗದ್ದೆ ಉತ್ಸವ ಆಯೋಜಿಸಲಾಗುತ್ತಿದೆ. ಗ್ರಾಮೀಣ ಸೊಗಡು ಮೈಗೂಡಿಸಿಕೊಂಡು ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಕೆಸರಿನಲ್ಲಿ ನಾನಾ ಕ್ರೀಡೆಗಳು ನಡೆಯಲಿದ್ದು, ಅಂದು ಬೆಳಗ್ಗೆ 9ಕ್ಕೆ ಬಜಕೂಡ್ಲು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ ನಾವಡ ದೀಪೋಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಅಮೃತದೀಪ ಕೆಸರು ಗದ್ದೆ ಉತ್ಸವ: ಆಮಂತ್ರಣಪತ್ರಿಕೆ ಬಿಡುಗಡೆ
0
ಆಗಸ್ಟ್ 02, 2022
Tags