ತಿರುವನಂತಪುರ: ವಿದ್ಯಾರ್ಥಿಗಳಿಗೆ ಬಸ್ ರಿಯಾಯಿತಿ ದರದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯನ್ನು ನೇಮಿಸಲಾಗಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಘೋಷಿಸಿದ್ದಾರೆ.
ರಾಜ್ಯ ಯೋಜನಾ ಮಂಡಳಿ ಸದಸ್ಯ ಡಾ. ಕೆ. ರವಿ ರಾಮನ್ ಅಧ್ಯಕ್ಷತೆಯ ಸಮಿತಿ ಹಾಗೂ ರಾಷ್ಟ್ರೀಯ ಸಾರಿಗೆ ಯೋಜನಾ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ.ಬಿ. ಜಿ. ಶ್ರೀದೇವಿ, ರಾಜ್ಯ ಸಾರಿಗೆ ಆಯುಕ್ತ ಎಸ್.ಶ್ರೀಜಿತ್ ಸದಸ್ಯರಾಗಿರುವ ತಜ್ಞ ಸಮಿತಿ ನೇಮಿಸಲಾಗಿದೆ.
ನ್ಯಾಯಮೂರ್ತಿ ರಾಮಚಂದ್ರನ್ ಸಮಿತಿಯು ಬಸ್ ಪ್ರಯಾಣ ದರವನ್ನು ಹೆಚ್ಚಿಸಿದಾಗ ಅದರೊಂದಿಗೆ ರಿಯಾಯಿತಿ ದರವನ್ನು ಹೆಚ್ಚಿಸಬೇಕು ಎಂದು ಸೂಚಿಸಿತ್ತು. ಆದರೆ ಈಗಿರುವ ರಿಯಾಯಿತಿ ದರವನ್ನೇ ಮುಂದುವರಿಸಲು ಹಾಗೂ ಈ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ.
ಇದರ ಬೆನ್ನಲ್ಲೇ ನೂತನ ಸಮಿತಿಯನ್ನು ನೇಮಿಸಲಾಯಿತು. ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳ ರಿಯಾಯಿತಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಚಿವರು ಹೇಳಿದ್ದರು. ರಿಯಾಯತಿ ಮೊತ್ತವನ್ನು ವಿದ್ಯಾರ್ಥಿಗಳು ನಾಚಿಕೆಗೇಡಿನ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಹೇಳಿದ ಸಚಿವರು, ಅನೇಕರು 5 ರೂ. ಪಾವತಿಸಿ ಬಾಕಿ ಮೊತ್ತ ಮರಳಿ ಪಡೆಯುತ್ತಿಲ್ಲ ಎಂದು ಸಚಿವರು ವಿವರಿಸಿದರು. '10 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ನೀಡಿದ್ದÀ ರಿಯಾಯಿತಿ ಮೊತ್ತ 2 ರೂಪಾಯಿ ಇಂದು ವಿದ್ಯಾರ್ಥಿಗಳನ್ನೇ ಸಂಕಷ್ಟಕ್ಕೆ ದೂಡುತ್ತಿದೆ. ರಿಯಾಯಿತಿ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ ಎಂಬುದು ಸಚಿವರ ಹೇಳಿಕೆ. ಇದರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಮುಗಿಬಿದ್ದಿವೆ.
ವಿದ್ಯಾರ್ಥಿಗಳ ಬಸ್ ರಿಯಾಯಿತಿ ದರ ಹೆಚ್ಚಳ ಸಾಧ್ಯತೆ: ಅಧ್ಯಯನಕ್ಕೆ ಸಮಿತಿ ರೂಪಿಸಲಾಗಿದೆ ಎಂದ ಸಾರಿಗೆ ಸಚಿವ
0
ಆಗಸ್ಟ್ 08, 2022