ಮಂಜೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು ಇದರ ಮಾರ್ಗದರ್ಶನದಲ್ಲಿ ಸುಂಕದಕಟ್ಟೆ ವಲಯದ ಪಾವಳ ವಿಭಾಗದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸ್ನೇಹಜ್ಯೋತಿ ಜ್ಞಾನವಿಕಾಸ ಕೇಂದ್ರ ಹಾಗೂ ಶ್ರೀ ಮಂಜುನಾಥ ನವಜೀವನ ಸಮಿತಿ ಪಾವಳ ಇವರ ಸಹಯೋಗದೊಂದಿಗೆ ಇತ್ತೀಚೆಗೆ ಆಟಿಡೊಂಜಿ ದಿನ ಕಾರ್ಯಕ್ರಮ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರಲ್ಲಿ ನಡೆಯಿತು. ಕನಿಲ ಶ್ರೀಭಗವತಿ ಕ್ಷೇತ್ರದ ಮಾನಿಂಜ ಆತಾರ್ ಕನಿಲ ದೀಪ ಬೆಳಗಿಸಿ ಚಾಲನೆ ನೀಡಿದರು. ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಉದ್ಘಾಟಿಸಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುಮಾರ್ ಪಾವಳ ಅಧಕ್ಷತೆ ವಹಿಸಿದ್ದರು.
ಸಮಾರಭದಲ್ಲಿ ಸಾಹಿತಿ ಹಾಗೂ ಶಿಕ್ಷಕಿ ಆಶಾ ದಿಲೀಪ್ ಅವÀರು ಆಟಿ ತಿಂಗಳ ವಿಶೇಷತೆ ಹಾಗೂ ವೈಶಿಷ್ಟ ತೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ, ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್, ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಉಪಸ್ಥಿತರಿದ್ದು ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ರಂಗ ಕಲಾವಿದೆ ಹಾಗೂ ಚಿತ್ರನಟಿ ಕುಮಾರಿ ರೂಪಶ್ರೀ ವರ್ಕಾಡಿ ಹಾಗೂ ಸ್ನೇಹಜ್ಯೋತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಮೀನಾಕ್ಷಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುನಾಡಿನ 100ಬಗೆಯ ತಿಂಡಿ ತಿನಿಸುಗಳ ಪ್ರದರ್ಶನ ವನ್ನು ಪ್ರದರ್ಶಿಸಲಾಯಿತು
ಸುಂಕದಕಟ್ಟೆ ವಲಯದ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಕಿಶನ್ ಕುಮಾರ್ ವಂದಿಸಿದರು. ಚೇತನ್ ವರ್ಕಾಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಞಾನವಿಕಾಸ ತಾಲ್ಲೂಕು ಸಮನ್ವಯಾಧಿಕಾರಿ ಸಂಗೀತಾ ಹಾಗೂ ಪಾವಳ ವಿಭಾಗದ ಸೇವಾ ಪ್ರತಿನಿಧಿ ಸುಮನ ಸಹಕರಿಸಿದರು.
ಒಕ್ಕೂಟದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು ನಂತರ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ನಡೆಯಿತು.