ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಗಣನೀಯವಾಗಿ ಕಡಿತಗೊಳಿಸುವ ಮೂಲಕ ಪಂಚಾಯಿತಿ ಆಡಳಿತವನ್ನು ಬುಡಮೇಲುಗೊಳಿಸಲು ಸರ್ಕಾರ ಯತ್ನಿಸುತ್ತಿರುವುದಾಗಿ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ತಿಳಿಸಿದ್ದಾರೆ.
ಸರ್ಕಾರ ಪಂಚಾಯಿತಿಗಳಿಗೆ ಫಂಡ್ ಕಡಿತಗೊಳಿಸಿದ ಕ್ರಮ ಖಂಡಿಸಿ ಜಿಲ್ಲೆಯಾದ್ಯಂತ ಐಕ್ಯರಂಗ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನೆಯನ್ವಯ ಎಣ್ಮಕಜೆ ಪಂಚಾಯಿತಿ ಕಚೇರಿ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು. ಪ್ರತಿ ವಾರ್ಡಿಗೆ ಸುಮಾರು 20ಲಕ್ಷ ವರೆಗೆ ಲಭಿಸುತ್ತಿದ್ದ ಅನುದಾನ 9ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಇನ್ನು ಲೈಫ್ ಯೋಜನೆಯನ್ವಯ ಮನೆಗಳ ನಿರ್ಮಾಣಕ್ಕೆ ಅರ್ಜಿ ಸ್ವೀಕಾರಿಸುವುದು ಬಿಟ್ಟರೆ, ಮನೆಗಳಿಗೆ ಹಣ ಮಂಜೂರಾಗಿ ಲಭಿಸುತ್ತಿಲ್ಲ. ಗ್ರಾಮ ಸಭೆಗಳ ತೀರ್ಮಾನಗಳೂ ಬೆಲೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿದರು. ಐಕ್ಯರಂಗ ಅಧ್ಯಕ್ಷ ರವಿ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಗಾಂಭೀರ್, ಶೆರೀಫ್, ಅಬೂಬಕ್ಕರ್ ಸಿದ್ದಿಕ್, ಆಯಿಶಾ ಪೆರ್ಲ, ಇಬ್ರಹಿಂ ಪೆರ್ಲ ಮುಂತಾದವರು ಉಪಸ್ಥಿತರಿದ್ದರು. ಸಿದ್ದಿಕ್ ಸ್ವಾಗತಿಸಿದರು. ಅಬ್ದುಲ್ ರಹಮಾಣ್ ವಂದಿಸಿದರು.
ಪಂಚಾಯಿತಿಗಳಿಗೆ ಅನುದಾನ ಕಡಿತಗೊಳಿಸಿದ ಸರ್ಕಾರ: ಐಕ್ಯರಂಗದಿಂದ ಪ್ರತಿಭಟನೆ
0
ಆಗಸ್ಟ್ 11, 2022
Tags