ಕಾಸರಗೋಡು: ಸಹಭಾಗಿತ್ವದ ಪಿಂಚಣಿ ಯೋಜನೆ ರದ್ದುಪಡಿಸಬೇಕು, ಮಧ್ಯಾಹ್ನದ ಊಟದ ಮೊತ್ತ ಹೆಚ್ಚಿಸಬೇಕು, ಮೆಡಿಸೆಪ್‍ನ ನ್ಯೂನತೆ ಪರಿಹರಿಸಬೇಕು, ಬಾಕಿ ಇರುವ ತುಟ್ಟಿಭತ್ಯೆ ತಕ್ಷಣ ಬಿಡುಗಡೆಗೊಳಿಸಬೇಕು, ಶಿಕ್ಷಕರಿಗೆ ನೇಮಕಾತಿ ಅಂಗೀಕಾರ ನೀಡಬೇಕು, 9 ಹಾಗೂ 10ನೇ ತರಗತಿಯಲ್ಲಿ 1:40ರ ಅನುಪಾತ ಪುನ:ಸ್ಥಾಪಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಕೆಪಿಎಸ್‍ಟಿಎ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಛೇರಿ ಎದುರು ಶನಿವಾರ ಧರಣಿ ನಡೆಯಿತು
ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಧರಣಿ ಉದ್ಘಾಟಿಸಿ ಮಾತನಾಡಿ, ಲೀವ್ ಸರೆಂಡರ್ ಸೌಲಭ್ಯ ಮತ್ತು ಕ್ಷಾಮ ಭತ್ಯೆ ಸರ್ಕಾರದ ವರದಾನವಲ್ಲ, ಇದು ನೌಕರರ ಹಕ್ಕು ಆಗಿದ್ದು, ಎರಡು ವರ್ಷಗಳಿಂದ ಕ್ಷಾಮಭತ್ತೆ ಬಾಕಿ ಉಳಿಸಿಕೊಂಡಿರುವ ಭಾರತದ ಏಕೈಕ ರಾಜ್ಯ ಕೇರಳವಾಗಿದೆ ಎಂದು ಆರೋಪಿಸಿದರು. ಜಿಲ್ಲಾಧ್ಯಕ್ಷ ಪ್ರಶಾಂತ ಕಾನತ್ತೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರಿಜಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಶಶಿಧರನ್, ಎ.ವಿ.ಗಿರೀಶನ್, ಜಿ.ಕೆ.ಗಿರೀಶ್, ಕೆ. ಅನಿಲಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ಶ್ರೀನಿವಾಸನ್, ಕೆ.ವಿ. ವಾಸುದೇವನ್, ಅಶೋಕನ್ ಕೋಟೋತ್, ಶೀಲಾ ಚಾಕೋ, ಜಾರ್ಜ್ ಥಾಮಸ್, ಸಿ.ಎಂ. ವರ್ಗೀಸ್, ಪಿ.ಟಿ. ಬೆನ್ನಿ, ಟಿ. ಅಶೋಕನ್ ನಾಯರ್, ಸಿ.ಎಂ.ವರ್ಗೀಸ್, ಜೋಸ್ ಮ್ಯಾಥ್ಯೂ, ಪಿ.ಎಸ್.ಸಂತೋಷ್ ಕುಮಾರ್, ಎ. ಜಯದೇವನ್ ಮತ್ತು ಕೆ.ಗೋಪಾಲಕೃಷ್ಣನ್ ಉಪಸ್ಥಿತರಿದ್ದರು.
ವಿವಿಧ ಬೇಡಿಕೆ ಮುಂದಿರಿಸಿ ಕೆಪಿಎಸ್‍ಟಿಎ ಡಿಡಿಇ ಕಚೇರಿ ಎದುರು ಧರಣಿ
0
ಆಗಸ್ಟ್ 28, 2022
Tags