ಕಾಸರಗೋಡು : ಕಾಸರಗೋಡು ಸÀಕಾಈರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಇವರ ಮಾರ್ಗದರ್ಶನದಲ್ಲಿ ವಿದುಷಿಃ ವಿದ್ಯಾಲಕ್ಷ್ಮಿ ಕುಂಬಳೆ ಇವರು ಕಣ್ಣೂರು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ ʼಕೇರಳ ಕನ್ನಡ ಪಠ್ಯಪುಸ್ತಕ – ಪಠ್ಯ ಮತ್ತು ಕಲಿಕೆ ಒಂದು ಅಧ್ಯಯನʼ ಎಂಬ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯವು ಪಿಎಚ್. ಡಿ ಪದವಿಯನ್ನು ಪ್ರದಾನ ಮಾಡಿದೆ. ಕೇರಳದಲ್ಲಿ ಕನ್ನಡ ಭಾμÁ ಪಠ್ಯಪುಸ್ತಗಳ ಮೇಲೆ ನಡೆದ ಮೊದಲ ಅಧ್ಯಯನ ಇದಾಗಿದೆ.
ನೃತ್ಯವಿದುಷಿ ವಿದ್ಯಾಲಕ್ಷ್ಮಿಯವರು ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿμÉ್ಯಯಾಗಿದ್ದಾರೆ. ನಾಡಿನಾದ್ಯಂತ ಹಲವು ಭರತನಾಟ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇವರು ಎಂ.ಎಡ್ ಪದವಿಧರೆಯಾಗಿದ್ದು, ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸಿನಲ್ಲಿರುವ ಬಿ.ಎಡ್ ಕೇಂದ್ರದಲ್ಲಿ ಆರು ವರುಷಗಳ ಕಾಲ ಕನ್ನಡ ಪ್ರಾಧ್ಯಾಪಿಕೆಯಾಗಿ ಸೇವೆಸಲ್ಲಿಸಿದ್ದಾರೆ. ಹಿರಿಯ ಬುನಾದಿ ಶಾಲೆ ಕುಂಬಳೆ, ಸಂತ ಆಗ್ನೇಸ್ ಕಾಲೇಜು ಮಂಗಳೂರು, ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಹಾಗೂ ಕಾಸರಗೋಡು ಸರಕಾರಿ ಕಾಲೇಜು ಈ ವಿದ್ಯಾಸಂಸ್ಥೆಗಳ ಹಳೆವಿದ್ಯಾರ್ಥಿ.
ವಿದ್ಯಾಲಕ್ಷ್ಮಿ ಕುಂಬಳೆ ಅವರಿಗೆ ಡಾಕ್ಟರೇಟ್
0
ಆಗಸ್ಟ್ 12, 2022