ಕಾಸರಗೋಡು: ಉದ್ಯೋಗ ವಿನಿಮಯ ಕಛೇರಿಯ ಮುಖಾಂತರ ನಡೆಸಲ್ಪಡುವ ಈ ವರ್ಷದ ವಿವಿಧ ಸ್ವ ಉದ್ಯೋಗ ಯೋಜನೆಗಳಿಗೆ ನೋಂದಣಿ ಮಾಡಿದ ಉದ್ಯೋಗಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ಮೀರದೆ, 21–50 ವರ್ಷ ಪ್ರಾಯವಿರುವವರಿಗಾಗಿ ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್ ಮುಖಾಂತರ 1ಲಕ್ಷ ರೂಪಾಯಿವರೆಗೆ ಸಾಲವು 20 ಸಾವಿರ ರೂಪಾಯಿ ಸಬ್ಸಿಡಿಯೂ ಲಭಿಸುವ ಕೆಸ್ರು ಸ್ವ ಉದ್ಯೋಗ ಯೋಜನೆ, ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂಪಾಯಿಯಾಗಿದ್ದು, ಪ್ರಾಯ ಮಿತಿ 21–45 ವರ್ಷ ಆಗಿರುವ ಒಂದಕ್ಕಿಂತ ಹೆಚ್ಚು ಉದ್ಯೋ ಗಾರ್ಥಿ ಗಳಿಗೆ ಜಂಟಿಯಾಗಿ ಸ್ವಉದ್ಯೋಗ ಪ್ರಾರಂಭಿಸುವುದಾದರೆ ಬ್ಯಾಂಕ್ ಮುಖಾಂತರ 10 ಲಕ್ಷ ರೂಪಾಯಿ ತನಕ ಸಾಲವು 2 ಲಕ್ಷ ರೂಪಾಯಿ ಸಬ್ಸಿಡಿಯು ಲಭಿಸುವ ಮಲ್ಟಿ ಪರ್ಪಸ್ ಜಾಬ್ ಕ್ಲಬ್ ಸ್ವ ಉದ್ಯೋಗ ಯೋಜನೆ, ಕುಟುಂಬ ವಾರ್ಷಿಕ ಆದಾಯ 1 ಲಕ್ಷ ರೂಪಾಯಿ ಇರುವ 50 ರಿಂದ 65 ವರ್ಷ ಮದ್ಯೆ ಪ್ರಾಯವಿರುವ ಉದ್ಯೋಗಾರ್ಥಿಗಳಿಗೆ ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್ ಮುಖಾಂತರ 50,000 ರೂಪಾಯಿ ಸಾಲವೂ, 12,500 ರೂಪಾಯಿ ಸಬ್ಸಿಡಿಯು ಲಭಿಸುವ ನವಜೀವನ ಸ್ವ ಉದ್ಯೋಗ ಯೋಜನೆ ಇರಲಿದೆ. ವಿಧವೆಯರು, ನಿಯಮನುಸಾರವಾಗಿ ವಿವಾಹ ಬಂಧನದಿಂದ ಬಿಡುಗಡೆ ಪಡೆದ ಸ್ತ್ರೀಯರು, ಪತಿಯಿಂದ ತ್ಯಜಿಸಲ್ಪಟ್ಟವರು, ಪತಿ ಕಾಣೆಯಾದವರು, ಪರಿಶಿಷ್ಟ ವಿಭಾಗದ ಅವಿವಾಹಿತ ಅಮ್ಮಂದಿರು, 30 ವರ್ಷ ಕಳೆದ ಅವಿವಾಹಿತರು, ಶೈಯಾವಸ್ಥೆಯಲ್ಲಿಯೂ ನಿತ್ಯ ರೋಗಿಯೂ ಆದ ಪತಿ ಯನ್ನು ಹೊಂದಿರುವ ಪತ್ನಿ, ಎಂಬೀ ವಿಭಾಗಕ್ಕೆ ಸೇರಿದ, ಕುಟುಂಬ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ವರೆಗಿರುವ 18 ಹಾಗೂ 55 ರ ಮದ್ಯೆ ಪ್ರಾಯವಿರುವ ಸ್ತ್ರೀ ಯರಿಗೆ ಸ್ವ ಉದ್ಯೋಗ ಆರಂಭಿಸಲು 50 ಸಾವಿರ ರೂಪಾಯಿ ಬಡ್ಡಿ ರಹಿತ ಸಾಲವು 25ಸಾವಿರ ರೂಪಾಯಿ ಸಬ್ಸಿಡಿಯು ಲಭಿಸುವ ಶರಣ್ಯ ಸ್ವಉದ್ಯೋಗ ಯೋಜನೆ, ಕುಟುಂಬ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ವರೆಗಿರುವ 21 ರಿಂದ 55 ವರ್ಷದ ಮಧ್ಯೆ ಪ್ರಾಯವಿರುವ ಅಂಗವಿಕಲರಿಗೆ ಸ್ವ ಉದ್ಯೋಗ ಆರಂಭಿಸಲು 50 ಸಾವಿರ ರೂಪಾಯಿ ಬಡ್ಡಿ ರಹಿತ ಸಾಲವೂ 25 ಸಾವಿರ ರೂಪಾಯಿ ಸಬ್ಸಿಡಿಯು ಲಭಿಸುವ ಕೈವಲ್ಯ ಸ್ವ ಉದ್ಯೋಗ ಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಫೆÇೀರಮ್ www.employment.kerala.gov.inಎಂಬ ವೆಬ್ಸೈಟ್ ನಲ್ಲಿಯೂ, ಉದ್ಯೋಗ ವಿನಿಮಯ ಕಛೇರಿಗಳಲ್ಲಿಯೂ ಲಭಿಸುವುದು.
ಟೌನ್ ಎಂಪೆÇ್ಲೀಯ್ ಮೆಂಟ್ ಎಕ್ಸ್ಚೇಂಜ್ ಹೊಸದುರ್ಗ - 04672209068
ಜಿಲ್ಲಾ ಎಂಪೆÇ್ಲೀಯ್ ಮೆಂಟ್ ಎಕ್ಸ್ಚೇಂಜ್ ಕಾಸರಗೋಡು - 04994 255582
ಸ್ವಉದ್ಯೋಗಕ್ಕಾಗಿ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೋಂದಣಿಗೆ ಅರ್ಜಿ ಅಪೇಕ್ಷೆ
0
ಆಗಸ್ಟ್ 02, 2022