ತಿರುವನಂತಪುರ: ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನೋಯೆಲ್ ಟೋಮಿನ್ ಜೋಸೆಫ್ ಅವರನ್ನು ಸ್ಥಾನದಿಂದ ವಜಾಗೊಳಿಸಲಾಗಿದೆ.
ವರದಕ್ಷಿಣೆಗಾಗಿ ತನಗೆ ಹಿಂಸೆ ನೀಡಲಾಗಿದೆ ಎಂದು ನೋಯೆಲ್ ಟೋಮಿನ್ ಜೋಸೆಫ್ ಅವರ ಪತ್ನಿ ದೂರು ದಾಖಲಿಸಿದ್ದರು.
ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ತನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ನೋಯಲ್ ವಿರುದ್ಧ ಕಾಸರಗೋಡು ರಾಜಪುರಂ ಪೋಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಕುರಿತು ಯುವತಿ ಯುವ ಕಾಂಗ್ರೆಸ್ ರಾಜ್ಯ ಸಮಿತಿಗೆ ಕೂಡಾ ದೂರು ನೀಡಿದ್ದರು.
ನೋಯೆಲ್ ಅವರು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರ ಪಿಎ ಆಗಿದ್ದರು. ಶಿಸ್ತು ಉಲ್ಲಂಘನೆಗಾಗಿ ಎರಡು ಬಾರಿ ಅವರ ವಿರುದ್ಧ ಪಕ್ಷ ಕ್ರಮ ಕೈಗೊಂಡಿತ್ತು. ನೋಯೆಲ್ ಅವರನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಯಿತು. ಆದರೆ ನಂತರ ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಈ ಕ್ರಮವನ್ನು ಹಿಂಪಡೆದಿದ್ದರು.
ವರದಕ್ಷಿಣೆ ಕಿರುಕುಳ ದೂರು: ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ನೋಯಲ್ ವಜಾ
0
ಆಗಸ್ಟ್ 08, 2022