HEALTH TIPS

ಅದಾನಿ ಗ್ರೀನ್ ಸಂಸ್ಥೆಯ ಸಾಲದ ಅನುಪಾತದ ಮೇಲೆ ನಿಗಾ ಅಗತ್ಯ: ವರದಿ

               ವದೆಹಲಿ:ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಉದ್ಯಮಿ ಗೌತಮ್ ಅದಾನಿ(Gautam Adani) ಅವರ ಒಡೆತನದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್(Adani Green Energy Ltd.) ಇದರ ಆರ್ಥಿಕತೆ ಕಳವಳಕ್ಕೆ ಕಾರಣವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಲು ಮುಂದಾಗಿರುವ ಅದಾನಿ ಗ್ರೀನ್ ಸಾಲದ ಮೇಲೆ ಸಾಲ ಪಡೆಯುತ್ತಿರುವುದರಿಂದ ಕಂಪೆನಿಯ ಸಾಲ-ಬಂಡವಾಳ ಅನುಪಾತ ಶೇ 95.3ಕ್ಕೆ ಏರಿಕೆಯಾಗಿದ್ದು ಖಾಸಗಿ ಕಂಪೆನಿಯೊಂದಕ್ಕೆ ಇದು ತೀರಾ ಹೆಚ್ಚಾಗಿದೆ ಎಂದು ಬ್ಲೂಂಬರ್ಗ್ ಇಂಟಲಿಜೆನ್ಸ್ ಇದರ ವಿಶ್ಲೇಷಕರಾಗಿರುವ ಶೆರಾನ್ ಚೆನ್ ಹೇಳಿದ್ದಾರೆ.

                 "ಅಭಿವೃದ್ಧಿ ಹಂತದಲ್ಲಿರುವ ಕಂಪೆನಿಯೊಂದಕ್ಕೆ ಈ ಅನುಪಾತ ಶೇ 70 ಅಥವಾ ಶೇ 80ರಷ್ಟು ನಿರೀಕ್ಷಿಸಬಹುದು, ಹೀಗಿರುವಾಗ ಅದಾನಿ ಗ್ರೀನ್‍ನ ಈಗಿನ ಆರ್ಥಿಕ ಸ್ಥಿತಿಯನ್ನು ಹತ್ತಿರದಿಂದ ಗಮನಿಸಬೇಕಾಗಿದೆ,'' ಎಂದು ಅವರು ಹೇಳಿದ್ದಾರೆ.

               ಅದಾನಿ ಗ್ರೀನ್ ಮೂಲಕ ಈಗಾಗಲೇ 70 ಬಿಲಿಯನ್ ಡಾಲರ್ ಹೂಡಿಕೆಗೆ ಅದಾನಿ ಪಣ ತೊಟ್ಟಿದ್ದಾರಲ್ಲದೆ ಈ ದಶಕದ ಅಂತ್ಯದೊಳಗೆ ಜಗತ್ತಿನ ಅತ್ಯಂತ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕನಾಗುವ ಗುರಿಯನ್ನು ಅದಾನಿ ಗ್ರೀನ್ ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries