ನವದೆಹಲಿ: ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆ
ನಡೆಯುತ್ತಿದ್ದು, ಕಾಂಗ್ರೆಸ್ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರಸಿದ್ಧ,
ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ನೆಹರೂ ಬರೆದಿದ್ದ ಐತಿಹಾಸಿಕ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಡೇಟ್ ವಿತ್ ಡೆಸ್ಟಿನಿ
("date with destiny) ಎಂದು ನಮೂದಿಸಿದ್ದರು, ಆದರೆ ಅದನ್ನು ಹೇಳುವಾಗ ಟ್ರಿಸ್ಟ್
ವಿತ್ ಡೆಸ್ಟಿನಿ ("tryst with destiny") ಎಂದು ಹೇಳಿದ್ದನ್ನು ಕಾಂಗ್ರೆಸ್ ಈ ಟ್ವೀಟ್
ಮೂಲಕ ನೆನಪಿಸಿಕೊಂಡಿದೆ.
75 ವರ್ಷಗಳ ಹಿಂದೆ ಮಧ್ಯರಾತ್ರಿಯ ನಂತರ ನೆಹರೂ ಅಮರವಾದ ಐತಿಹಾಸಿಕ Tryst with Destiny ಭಾಷಣ ಮಾಡಿದ್ದರು. 14.08.47 ರಂದು ಅವರು ಈ ಭಾಷಣದಕ್ಕೆ ಸಿದ್ಧಪಡಿಸಿದ್ದ ಕೈಬರಹದ ಕರಡಿನಲ್ಲಿ ಡೇಟ್ ವಿತ್ ಡೆಸ್ಟಿನಿ ಎಂಬ ಶಬ್ದವನ್ನು ಪ್ರಯೋಗಿಸಿದ್ದರು, ನಿಜವಾದ ಪ್ರತಿಭೆಯ ಕ್ಷಣದಲ್ಲಿ ಅವರು ಅದನ್ನು ಟ್ರಿಸ್ಟ್ ವಿತ್ ಡೆಸ್ಟಿನಿ ಎಂದು ಬದಲಾವಣೆ ಮಾಡಿದ್ದರು ಎಂದು ರಮೇಶ್ ಟ್ವಿಟರ್ ನಲ್ಲಿ ಬರೆದಿದ್ದಾರೆ.
ನಾವು ಹಲವು ವರ್ಷಗಳ ಹಿಂದೆ ಈ ದಿನಾಂಕವನ್ನು ನಿರೀಕ್ಷಿಸಿದ್ದೆವು (ಡೇಟ್ ವಿತ್ ಡೆಸ್ಟಿನಿ) ಈಗ ನಾವು ನಮ್ಮ ಪ್ರತಿಜ್ಞೆಯನ್ನು ಪುನಃ ಪೂರ್ಣ ಪ್ರಮಾಣದಲ್ಲಿ ಅಷ್ಟೇ ಅಲ್ಲದೇ ವ್ಯಾಪಕ ದೃಷ್ಟಿಯಲ್ಲಿ ಕೈಗೊಳ್ಳುವ ಸಮಯ ಬಂದಿದೆ. ಈ ತಡರಾತ್ರಿಯಲ್ಲಿ ಜಗತ್ತೇ ಮಲಗಿರುವಾಗ, ಭಾರತ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಂಡಿದೆ" ಎಂಬುದು ನೆಹರೂ ಭಾಷಣದ ಸಾರಾಂಶವಾಗಿತ್ತು.