HEALTH TIPS

'ಹುಡುಗರಿಗೆ ಚೂಡಿದಾರ್ ಒಪ್ಪದೇ?': ವಿವಾದಕ್ಕೆಡೆಯಾದ ಮುನೀರ್ ಹೇಳಿಕೆ: ಲಿಂಗ ತಟಸ್ಥ ಸಮವಸ್ತ್ರ ಎಂದರೇನು?

         
               ಕೊಚ್ಚಿ: ಲಿಂಗ ಸಮಾನತೆ(ತಟಸ್ಥ) ಸಮವಸ್ತ್ರಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಲೇವಡಿ ಮಾಡಿದ್ದ ಮುಸ್ಲಿಂ ಲೀಗ್ ಮುಖಂಡ ಎಂ.ಕೆ.ಮುನೀರ್ ಹೊಸ ವಿವಾದಾತ್ಮಕ ನಾಯಕ. ಮುಖ್ಯಮಂತ್ರಿ ಮತ್ತು ಅವರ ಪತ್ನಿ ಒಟ್ಟಿಗೆ ಪ್ರಯಾಣಿಸುವಾಗ ಅವರ ಪತ್ನಿ ಪ್ಯಾಂಟ್ ಅನ್ನು ಏಕೆ ಧರಿಸಬಾರದು ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೀರೆ ಮತ್ತು ರವಿಕೆ ಧರಿಸಿದರೆ ಏನು ತಪ್ಪಾಗುತ್ತದೆ ಎಂದು ಎಂಕೆ ಮುನೀರ್ ಲೇವಡಿಯಿಂದ ಪ್ರಶ್ನಿಸಿದ್ದಾರೆ.
            ಚೂಡಿದಾರ್ ಹುಡುಗರಿಗೆ ಹೊಂದುವುದಿಲ್ಲವೇ ಎಂದು ಮುನೀರ್ ಕೇಳಿದರು. ಸರ್ಕಾರ ಲಿಂಗ ತಟಸ್ಥ ಎಂದು ಬಿಂಬಿಸುವ ಮೂಲಕ ಲಿಂಗ ಅಸಮಾನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಎಂಕೆ ಮುನೀರ್ ಆರೋಪಿಸಿದ್ದಾರೆ. ಧರ್ಮ ರಹಿತ ಜೀವನ ಎಂದು ಹೇಳುವ ಮೂಲಕ ಧರ್ಮಭ್ರಷ್ಟತೆಯನ್ನು ಕಳ್ಳ ಸಾಗಣೆ ಮಾಡುವ ಪ್ರಯತ್ನ ಇದಾಗಿದೆ ಎಂದರು.
         ವಳಯಂಚರಗರಾಯಲ್‍ನ ಸರ್ಕಾರಿ ಶಾಲೆಯಲ್ಲಿ ಜಾರಿಗೊಳಿಸಲಾದ ಲಿಂಗ ತಟಸ್ಥ ಸಮವಸ್ತ್ರವನ್ನು ಇತರ ಹಲವು ಶಾಲೆಗಳು ಅಳವಡಿಸಿಕೊಂಡ ನಂತರ ಎಲ್.ಡಿ.ಎಫ್ ಸರ್ಕಾರವೂ ಈ ಆಲೋಚನೆಯನ್ನು ಬೆಂಬಲಿಸಿತು. ಆದರೆ ಶಿಕ್ಷಣ ಇಲಾಖೆ ಇದ್ಯಾವುದಕ್ಕೂ ಮುಂದಾಗಿಲ್ಲ. ಆದರೆ ತಿಂಗಳ ನಂತರ, ಎಂಕೆ ಮುನೀರ್ ಮತ್ತೆ ಲಿಂಗ ತಟಸ್ಥ ಸಮವಸ್ತ್ರದೊಂದಿಗೆ ಪಕ್ಷದ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುನೀರ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಆದರೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಯುಡಿಎಫ್ ನಾಯಕರು ಸಿದ್ಧರಾಗಿಲ್ಲ.
              ಇದೇ ವೇಳೆ,  ಲೀಗ್ ಸೇರಿದಂತೆ ಸಂಪ್ರದಾಯವಾದಿ ಪಕ್ಷಗಳು ಲಿಂಗ ತಟಸ್ಥತೆಯ ಕಲ್ಪನೆಯನ್ನು ವಿರೋಧಿಸಿದರೂ, ಇದು ಹೊಸ ಆಲೋಚನೆಯಲ್ಲ ಎಂಬುದು ಸತ್ಯ. ವೈದ್ಯರೂ ಆಗಿರುವ ಎಂ.ಕೆ.ಮುನೀರ್ ಅವರು ಲಿಂಗ ತಟಸ್ಥತೆಯ ಪರಿಕಲ್ಪನೆಯ ಪರವಾಗಿರಲಿ ಅಥವಾ ಇಲ್ಲದಿರಲಿ ಮೌಲ್ಯಮಾಪನ ಮಾಡಿರುವುದು ಗಮನಾರ್ಹವಾಗಿದೆ. ಲಿಂಗ ತಟಸ್ಥ ಸಮವಸ್ತ್ರವನ್ನು ಅನುμÁ್ಠನಗೊಳಿಸುವುದು ಟ್ರಾನ್ಸ್ಜೆಂಡರ್ ಸಮುದಾಯಗಳನ್ನು ಒಳಗೊಂಡಂತೆ ಮುಖ್ಯವಾಹಿನಿಯ ಸಮಾಜದ ಗುರಿಯನ್ನು ಹೊಂದಿದೆ ಮತ್ತು ಅಸಮಾನತೆಗಳನ್ನು ಮತ್ತು ಬಟ್ಟೆಯ ಆಧಾರದ ಮೇಲೆ ಅವಕಾಶಗಳನ್ನು ನಿರಾಕರಿಸುವುದನ್ನು ತಪ್ಪಿಸುತ್ತದೆ ಎಂದು ಕಲ್ಪನೆಯ ಬೆಂಬಲಿಗರು ಹೇಳುತ್ತಾರೆ.
           ಲಿಂಗ ಭೇದವಿಲ್ಲದ  ಶೌಚಾಲಯಗಳು, ಲೈಂಗಿಕತೆಯ ಶಿಕ್ಷಣ ಮತ್ತು ಲಿಂಗ ಪ್ರತ್ಯೇಕತೆಯನ್ನು ತೊಡೆದುಹಾಕಲು ಕ್ರಮಗಳಂತಹ ಅನೇಕ ಪ್ರಗತಿಪರ ಚರ್ಚೆಗಳಿಂದ ಲಿಂಗ ತಟಸ್ಥ ಸಮವಸ್ತ್ರಗಳನ್ನು ಅನುಸರಿಸಲಾಯಿತು. ಲೈಂಗಿಕ ಶಿಕ್ಷಣ ಸೇರಿದಂತೆ ಕೇರಳದ ಸಾಮಾನ್ಯ ಜನರಲ್ಲಿ ಒಮ್ಮತವಿಲ್ಲ. ಈ ವಿಷಯಗಳ ಮೇಲೆ ಬಲಪಂಥೀಯ ಸಂಘಟನೆಗಳು ಪ್ರತಿಭಟನೆಗೆ ಇಳಿದಿರುವುದು ಕೇರಳದ ಇತಿಹಾಸ.
          ಇದೇ ವೇಳೆ, ಕೇರಳದಲ್ಲಿ ಮೊದಲ ಬಾರಿಗೆ ಶಾಲೆಗಳಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಅಳವಡಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ಲಿಂಗವನ್ನು ಲೆಕ್ಕಿಸದೆ ಮಿಲಿಟರಿ ಮತ್ತು ಪೋಲೀಸರು ಬಹಳ ಹಿಂದಿನಿಂದಲೂ ಒಂದೇ ಸಮವಸ್ತ್ರವನ್ನು ಹೊಂದಿದ್ದಾರೆ. ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ಅನೇಕ ಉದ್ಯೋಗಗಳಲ್ಲಿ, ಪ್ಯಾಂಟ್ ಮತ್ತು ಶರ್ಟ್‍ಗಳನ್ನು ಒಳಗೊಂಡಂತೆ ಆರಾಮದಾಯಕ ಮತ್ತು ದೇಹವು ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುವ ಬಟ್ಟೆಗಳನ್ನು ಪೆÇ್ರೀತ್ಸಾಹಿಸಲಾಗುತ್ತದೆ. ಅನೇಕ ಖಾಸಗಿ ಸಂಸ್ಥೆಗಳಲ್ಲಿ ಸಮವಸ್ತ್ರವೂ ಹೀಗಿದೆ. ಕೇರಳದಲ್ಲಿ ಮುಸ್ಲಿಂ ಸಂಘಟನೆಗಳು ನಡೆಸುತ್ತಿರುವ ವೃತ್ತಿಪರ ಕಾಲೇಜುಗಳಲ್ಲಿ ಲಿಂಗ ಭೇದವಿಲ್ಲದೆ ವಿದ್ಯಾರ್ಥಿಗಳ ಸಮವಸ್ತ್ರ ಪ್ಯಾಂಟ್, ಶರ್ಟ್ ಮತ್ತು ಬ್ಲೇಜರ್ ಇದೆ. ಸರ್ಕಾರಿ ಶಾಲೆಯಲ್ಲಿ ಮೊದಲ ಬಾರಿಗೆ ಪರಿಕಲ್ಪನೆಯನ್ನು ಜಾರಿಗೆ ತರಲಾಗುವ  ಸುದ್ದಿಯನ್ನು ಮೀರಿ ಮುನೀರ್ ಅವರ ಹೇಳಿಕೆಗಳು ರಾಜಕೀಯ ಚರ್ಚೆಗೆ ಮದ್ದುಗುಂಡುಗಳಲ್ಲದೆ ಮತ್ತೇನಲ್ಲ.
        ಇದೇ ವೇಳೆ ಲಿಂಗ ತಟಸ್ಥ ಸಮವಸ್ತ್ರದಂತಹ ವಿಚಾರಗಳನ್ನು ಬೆಂಬಲಿಸಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವುದಾಗಿ ಘೋಷಿಸಿರುವ ಶಿಕ್ಷಣ ಇಲಾಖೆ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂಬ ಸೂಚನೆ ನೀಡುತ್ತಿದೆ. ಶಿಕ್ಷಣ ಸಚಿವರು ಕೂಡ ಮುನೀರ್ ಅವರನ್ನು ಹೆಸರಿಸದೆ ಟೀಕಿಸಿದ್ದಾರೆ. ಎಮ್ಮೆಯೊಂದು ಲೈಂಗಿಕ ಶಿಕ್ಷಣ ಪುಸ್ತಕವನ್ನು ಹಿಡಿದಿರುವ ಚಿತ್ರವನ್ನು ಸಚಿವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
                  ಕೇರಳ ಹಿಂದುಳಿದಿದೆ:
         ಹಲವು ಸೂಚ್ಯಂಕಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಕೇರಳವು ಲಿಂಗೇತರ ಸಮವಸ್ತ್ರ ಮತ್ತು ಲೈಂಗಿಕ ಶಿಕ್ಷಣದ ವಿಷಯದಲ್ಲಿ ವರ್ಷಗಳ ಹಿಂದೆಯೇ ಇದೆ ಎಂಬುದು ಸತ್ಯ. ಅನೇಕ ರಾಜ್ಯಗಳಲ್ಲಿ, ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಅವರು ಇಷ್ಟಪಡುವ ಬಟ್ಟೆಗಳನ್ನು ಆಯ್ಕೆ ಮಾಡಲು ಸ್ವತಂತ್ರರಾಗಿದ್ದಾರೆ. ಹುಡುಗರು ಮತ್ತು ಹುಡುಗಿಯರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾಡಿದ ಸಮವಸ್ತ್ರದ ಬದಲಿಗೆ, ಯುರೋಪಿಯದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಸೇರಿಸಿಕೊಂಡು ಮಾಡಿದ ಸಮವಸ್ತ್ರವಾಗಿದೆ. ಅನೇಕ ಸ್ಥಳಗಳಲ್ಲಿ ಅನುಸರಿಸಲಾಗುತ್ತಿದೆ ಕೂಡಾ. ಲಿಂಗವನ್ನು ಲೆಕ್ಕಿಸದೆ, ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಪ್ಯಾಂಟ್, ಸ್ಕರ್ಟ್ ಅಥವಾ ಶಾಟ್ರ್ಸ್ ಧರಿಸಬೇಕೆ ಎಂದು ಆಯ್ಕೆ ಮಾಡಲು ಸ್ವತಂತ್ರರು. ಇದರೊಂದಿಗೆ, ಮಕ್ಕಳು ತಮ್ಮ ಕೂದಲನ್ನು ಕಟ್ಟುವ ರೀತಿಯಲ್ಲಿ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
      ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಯು.ಕೆ.ಯ ಸೋಮರ್ ಸೆಟ್ ನಲ್ಲಿರುವ ನಾರ್ಟನ್ ಹಿಲ್ ಶಾಲೆಯಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಅಳವಡಿಸಲಾಯಿತು. ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಸಮವಸ್ತ್ರದ ಅಗತ್ಯವಿಲ್ಲ, ಮಕ್ಕಳನ್ನು ಮಕ್ಕಳಂತೆ ಕಂಡರೆ ಸಾಕು ಎಂದು ಶಾಲಾ ಅಧಿಕಾರಿಗಳು ನಿರ್ಧರಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries