ನವದೆಹಲಿ: ಹಣದುಬ್ಬರದಿಂದಾಗಿ ಬೆಲೆಯೇರಿಕೆಯಿಂದ ನಲುಗಿರುವ ಗ್ರಾಹಕರು ಹಬ್ಬಗಳ ಹಂಗಾಮಿನಲ್ಲಿ ಸ್ವಲ್ಪ ಸಮಾಧಾನಪಡುವಂತಾಗಿದೆ. ಕೆಲ ವಸ್ತುಗಳ ದರ ಕ್ರಮೇಣ ಇಳಿಮುಖವಾಗುತ್ತಿದ್ದು, ಈಗ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳು, ದಿನನಿತ್ಯದ ವಸ್ತುಗಳ ಜತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳ ದರ ಕೂಡ ತಗ್ಗಿದೆ.
ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳಾದ ಎಲ್ಜಿ, ಸ್ಯಾಮ್ಂಗ್, ಸೋನಿ ಟಿವಿ ದರ ಶೇ.5ರಿಂದ 8ರಷ್ಟು ಇಳಿಕೆ ಆಗಿದೆ. ಲ್ಯಾಪ್ಟಾಪ್ ಬೆಲೆ 1,500ರಿಂದ 2,000 ರೂಪಾಯಿಯಷ್ಟು ಇಳಿದಿದೆ. ಸ್ಮಾರ್ಟ್ಫೋನ್ ಬೆಲೆ ಶೇ. 4 ರಿಂದ 5ರಷ್ಟು ತಗ್ಗಿದೆ.
ಖಾದ್ಯ ತೈಲದ ಬೆಲೆ ಶೇ.15ರಿಂದ 20ರಷ್ಟು ಇಳಿಕೆ ಆಗಿದ್ದು, ಬಿಸ್ಕತ್ನ ದರ ಶೇ.10ರಿಂದ 15 ರಷ್ಟು ಕಡಿಮೆ ಆಗಿದೆ. ದರ ಇಳಿಕೆಯ ಈ ಋತು ಮುಂದಿನ ಕೆಲವು ತಿಂಗಳಲ್ಲೂ ಮುಂದುವರಿಯಲಿದೆ ಎಂದು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ವಸ್ತು (ಎಫ್ಎಂಸಿಜಿ) ಕೈಗಾರಿಕೆಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಉತ್ಪಾದನಾ ವೆಚ್ಚ ತಗ್ಗಿದೆ. ಇದರ ಲಾಭವನ್ನು ಬಿಸ್ಕತ್ಗಳ ದೊಡ್ಡ ಪ್ಯಾಕ್ಗಳಿಗೆ ವರ್ಗಾಯಿಸಿದ್ದೇವೆ. ಆ.15ರಿಂದ ಈ ಪ್ಯಾಕ್ಗಳ ಬೆಲೆ ಶೇ.10ರಿಂದ 15 ರಷ್ಟು ಇಳಿಕೆ ಆಗಿದೆ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಮಯಾಂಕ್ ಷಾ ಹೇಳಿದ್ದಾರೆ. ಉತ್ಪಾದನಾ ಖರ್ಚು ಇನ್ನಷ್ಟು ತಗ್ಗುವ ಸಂಭವ ಇದ್ದು, ಇದನ್ನು ನೋಡಿಕೊಂಡು ಬೆಲೆ ಸುಧಾರಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ತಿಳಿಸಿದ್ದಾರೆ.
ಅನಿಯಂತ್ರಿತ ಬೆಲೆಗಳು: ಕರೊನಾ ಸಾಂಕ್ರಾಮಿಕದ ಕಾರಣ ಅಂದಾಜು ಎರಡು ವರ್ಷ ಬೆಲೆಗಳು ಅನಿಯಂತ್ರಿತವಾಗಿದ್ದವು. ಕರೊನಾ ಪಿಡುಗು ಹತೋಟಿಗೆ ಬರುತ್ತಿದೆ ಎನ್ನುವ ಸಂದರ್ಭದಲ್ಲಿ ಯೂಕ್ರೇನ್- ರಷ್ಯಾ ಸಂಘರ್ಷ ಆರಂಭವಾಗಿ ಅಂದಾಜು ಆರು ತಿಂಗಳು ಇದರ ಪರಿಣಾಮ ಇತ್ತು. ಈಗಲೂ ಕೆಲವು ಸರಕುಗಳ ಬೆಲೆ ಶೇ.20ರಿಂದ 25ರಷ್ಟು ದುಬಾರಿಯಾಗಿಯೇ ಇದೆ ಎಂದು ವಿಪ್ರೊ ಫುಡ್ಸ್ ಬಿಜಿನೆಸ್ನ ಮುಖ್ಯಸ್ಥ ಅನಿಲ್ ಚುಗ್ ಹೇಳಿದ್ದಾರೆ.
ಓಪನ್ ಸೆಲ್ ಪ್ಯಾನಲ್ ಬೆಲೆ 27 ಡಾಲರ್ಗೆ ಇಳಿಕೆ: ಬಹುಕಾಲದಿಂದ ಮಾರಾಟವಾಗದ ಎಲೆಕ್ಟ್ರಾನಿಕ್ ವಸ್ತುಗಳ ತ್ವರಿತ ವಿಲೇವಾರಿ ಮಾಡಲು ತಯಾರಕರು ಬಯಸಿರುವುದರಿಂದ ಬೆಲೆ ಇಳಿಕೆ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಚಿಪ್, ಟಿವಿ ಪ್ಯಾನಲ್ಗಳ ಬೆಲೆ ಶೇ.80 ಇಳಿಕೆ ಆಗಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆ ಆಗಿದೆ. 32 ಇಂಚಿನ ಟಿವಿಯ ಓಪನ್ ಸೆಲ್ ಪ್ಯಾನಲ್ ದರ ಕರೊನಾ ಸಾಂಕ್ರಾಮಿಕದ ವೇಳೆ 100 ಡಾಲರ್ ಇತ್ತು. ಈಗ 27 ಡಾಲರ್ಗೆ ಇಳಿಕೆ ಆಗಿದೆ. ಹಬ್ಬದ ಸಂದರ್ಭದಲ್ಲಿ ಬೆಲೆ ತಗ್ಗಿರುವುದರಿಂದ ಮಾರಾಟ ಹೆಚ್ಚಿಸಲು ಅನುಕೂಲ ಆಗಿದೆ ಎಂದು ಚಿಲ್ಲರೆ ವ್ಯಾಪಾರದ ಸಮೂಹ ಮಳಿಗೆ ಗ್ರೇಟ್ ಈಸ್ಟ್ರನ್ನ ನಿರ್ದೇಶಕ ಪುಲ್ಕಿತ್ ಬೈದ್ ಹೇಳಿದ್ದಾರೆ.
ಖಾದ್ಯ ತೈಲ ಅಗ್ಗ: ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆಯಲ್ಲಿ 10ರಿಂದ 15 ರೂಪಾಯಿ ತಗ್ಗಿಸುವಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇದರಿಂದ ಮೂರ್ನಾಲ್ಕು ತಿಂಗಳಲ್ಲಿ ಖಾದ್ಯ ತೈಲದ ದರ 15ರಿಂದ 25 ರೂ. ಇಳಿಕೆ ಕಂಡಿದೆ. ಕಚ್ಚಾ ವಸ್ತುಗಳ ಮೇಲಿನ ವೆಚ್ಚ ತಗ್ಗಿದ್ದು, ಹಬ್ಬದ ಸಮಯದಲ್ಲಿ ಮತ್ತು ವಿವಾಹದ ಋತುವಿನಲ್ಲಿ ಬೇಡಿಕೆಯ ಗುರಿಯನ್ನು ಸಾಧಿಸಲು ತನ್ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಎಫ್ಎಂಸಿಜಿ ಕಂಪನಿಗಳು ಮತ್ತಷ್ಟು ದರ ಇಳಿಕೆ ಮಾಡಲಿವೆ ಎಂದು ಲೈಫ್ಸ್ಟ್ರೈಲ್ ಡಿಪಾರ್ಟ್ವೆುಂಟಲ್ ಸ್ಟೋರ್ಸ್ನ ಮುಖ್ಯ ಅಧಿಕಾರಿ ದೇವರಾಜನ್ ಅಯ್ಯರ್ ಹೇಳಿದ್ದಾರೆ.
ದರ ಕಡಿಮೆ: ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಪದಾರ್ಥಗಳು, ಬಿಸ್ಕತ್ತು, ಖಾದ್ಯತೈಲ