ಕಣ್ಣೂರು: ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಸಹಪ್ರಾಧ್ಯಾಪಕರಾಗಿ ಪ್ರಿಯಾವರ್ಗೀಸ್ ನೇಮಕವನ್ನು ಸ್ಥಗಿತಗೊಳಿಸಿದ ರಾಜ್ಯಪಾಲರ ಕ್ರಮಕ್ಕೆ ಪ್ರತಿಕ್ರಿಯಿಸಿದ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜನ್ ಇದು ಐತಿಹಾಸಿಕ ಮತ್ತು ಪ್ರಶ್ನಾರ್ಹ ಎಂದಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿನ ನೇಮಕಾತಿಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಿದ ಇತಿಹಾಸವಿಲ್ಲ ಎಂದು ಜಯರಾಜನ್ ಹೇಳಿದರು. ರಾಜ್ಯಪಾಲರ ಕ್ರಮವನ್ನು ಕೇವಲ ಕಾನೂನು ಸಮಸ್ಯೆಯಾಗಿ ನೋಡಲಾಗದು ಎಂದು ಅವರು ಪ್ರತಿಕ್ರಿಸಿದ್ದಾರೆ.
ಇದು ಕೇವಲ ಒಬ್ಬ ವ್ಯಕ್ತಿಯ ಕಾನೂನು ಸಮಸ್ಯೆಯಲ್ಲ, ಅದನ್ನು ಆ ರೀತಿಯಲ್ಲಿ ನೋಡಲಾಗುವುದಿಲ್ಲ. ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ತಿಳಿಸಲಿ ಎಂದು ಜಯರಾಜನ್ ಹೇಳಿದರು. ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ಕೆ.ಕೆ. ರಾಗೇಶ್ ಪತ್ನಿ ಪ್ರಿಯಾ ವರ್ಗೀಸ್ ನೇಮಕಕ್ಕೆ ರಾಜ್ಯಪಾಲರು ತಡೆ ನೀಡಿದ್ದರು. ಇದು ಸಿಪಿಎಂ ನ್ನು ಕೆರಳಿಸಿದೆ.
ಪ್ರಿಯಾ ವರ್ಗೀಸ್ ನೇಮಕದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಈ ನೇಮಕದಲ್ಲಿ ಕ್ರಮ ಕೈಗೊಂಡಿದ್ದಾರೆ. ಸಹಪ್ರಾಧ್ಯಾಪಕರಾಗಿ ಪ್ರಿಯಾವರ್ಗೀಸ್ ಅವರ ನೇಮಕವನ್ನು ಸ್ಥಗಿತಗೊಳಿಸಿರುವ ರಾಜ್ಯಪಾಲರು, ಕಣ್ಣೂರು ವಿವಿ ವಿಸಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಕುಲಪತಿಯ ಅಧಿಕಾರವನ್ನು ಬಳಸಿಕೊಂಡು ರಾಜ್ಯಪಾಲರು ಉಲ್ಲಂಘನೆಯ ವಿರುದ್ಧ ಸೇಡು ತೀರಿಸಿಕೊಂಡರು ಎನ್ನಲಾಗಿದೆ.
ನೇಮಕಾತಿಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ಇತಿಹಾಸದಲ್ಲಿಲ್ಲ: ವಿವಾದಿತ ನೇಮಕಾತಿ ಸ್ಥಗಿತಗೊಳಿಸಿದ್ದಕ್ಕೆ ಎಂ.ವಿ. ಜಯರಾಜನ್ ಪ್ರತಿಕ್ರಿಯೆ
0
ಆಗಸ್ಟ್ 18, 2022