ಕಾಸರಗೋಡು: 2022ನೇ ಸಾಲಿನ ರಾಷ್ಟ್ರೀಯ ಸಬ್ ಜೂನಿಯರ್-ಜೂನಿಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ಗೆ ಬುಧವಾರ ಚಾಲನೆ ನೀಡಲಾಯಿತು.
ಚಾಂಪಿಯನ್ ಶಿಪ್ ನಡೆಯುವ ಕಾಸರಗೋಡು ನಗರಸಭೆ ಪುರಭವನದಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಎನ್.ಎ. ನೆಲ್ಲಿಕುನ್ ಶಾಸಕ ಧ್ವಜಾರೋಹಣ ಮಾಡಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ಹಾಗೂ ಸ್ವಾಗತಸಮಿತಿ ಕಾರ್ಯಾಧ್ಯಕ್ಷ ವಕೀಲ ವಿ.ಎಂ. ಮುನೀರ್, ಕಾಸರಗೋಡು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ಕೌನ್ಸಿಲರ್, ಪವರ್ ಲಿಫ್ಟಿಂಗ್‍ಸಂಘದ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಸಂಘಟನಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಧ್ವಜಾರೋಹಣಕ್ಕೂ ಮೊದಲು ಕಾಸರಗೋಡು ನಗರದಲ್ಲಿ ಮಾರ್ಚ್ ಪಾಸ್ಟ್ ಆಯೋಜಿಸಲಾಗಿತ್ತು.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕಾಸರಗೋಡು ಜಿಲ್ಲೆ ಸಾಕ್ಷಿಯಾಗುತ್ತಿದ್ದು, ಕೇರಳ, ಒಂದು ಕೇಂದ್ರಾಡಳಿತ ಪ್ರದೇಶ (ಪುತುಚೇರಿ) ಸೇರಿದಂತೆ ದೇಶದ 22 ರಾಜ್ಯಗಳ ತಂಡಗಳು ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುತ್ತಿದ್ದು, ಐದು ದಿನಗಳ ಚಾಂಪಿಯನ್‍ಶಿಪ್‍ಗಾಗಿ 250 ಪುರುಷ ಆಟಗಾರರು, 160 ಮಹಿಳಾ ಆಟಗಾರರು, 100 ಮಂದಿ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ.
ಕಾಸರಗೋಡಿನಲ್ಲಿ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ಗೆ ಚಾಲನೆ
0
ಆಗಸ್ಟ್ 12, 2022
Tags