ಬದಿಯಡ್ಕ: ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಕನ್ನಡಭವನ ನಿರ್ಮಿಸುವ ಕರ್ನಾಟಕ ಸರ್ಕಾರದ ಭರವಸೆ ಈಡೇರುವ ಹಂತಕ್ಕೆ ತಲುಪಿದೆ. ಡಾ. ಕಯ್ಯಾರ ಅವರ ಮನೆಯವರು ಉದಾರವಾಗಿ ನೀಡಲು ಮುಂದಾಗಿರುವ ಜಾಗದಲ್ಲೇ ಈ ಭವನ ನಿರ್ಮಾಣವಾಗುತ್ತಿರುವುದು ಡಾ. ಕಯ್ಯಾರ ಅವರ ಅಭಿಮಾನಿಗಳು ಹಾಗೂ ಕಾಸರಗೋಡಿನ ಕನ್ನಡಿಗರಲ್ಲಿ ಸಂತಸ ತಂದುಕೊಟ್ಟಿದೆ.
'ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ'ಎಂದು ಕಾಸರಗೋಡಿನ ಕನ್ನಡಿಗರಿಗಾದ ಅನ್ಯಾಯದ ವಿರುದ್ಧ ಸೆಟೆದು ನಿಂತು ಜೀವಮಾನವಿಡೀ ಗಡಿನಾಡ ಕನ್ನಡಿಗರಿಗಾಗಿ, ಕನ್ನಡ ಭಾಷೆ, ಸಂಸ್ಕøತಿಯ ಉಳಿವಿಗಾಗಿ ಹೋರಾಟ ನಡೆಸಿದ ಹಿರಿಯ ಚೇತನ ಡಾ. ಕಯ್ಯಾರ ಕಿಞಣ್ಣ ರೈ ಆಗಿದ್ದಾರೆ. ಇವರ ಹೆಸರಿನ ಸ್ಮಾರಕ ಸಾಂಸ್ಕೃತಿಕ ಕೇಂದ್ರ ನಿರ್ಮಾಣಕಾರ್ಯದ ಬಗ್ಗೆ ಸಮಾಲೋಚನಾ ಸಭೆ ಕಾಸರಗೋಡು ಜಿಲ್ಲಾ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದಿದ್ದು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸ್ಮಾರಕ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ಮೀಸಲಿರಿಸಿದ್ದು, ಕೇರಳ ಸರ್ಕಾರ ಬಜೆಟ್‍ನಲ್ಲಿ ಮೀಸಲಿರಿಸಿರುವ 50ಲಕ್ಷ ರೂ. ಮೊತ್ತದ ಜತೆಗೆ ಡಾ. ಕಯ್ಯಾರ ಅಭಿಮಾನಿಗಳು, ದಾನಿಗಳಿಂದಲೂ ಮೊತ್ತ ಸಂಗ್ರಹಿಸಿ, ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಯೋಜನೆಯಿರಿಸಿಕೊಳ್ಳಲಾಗಿದೆ.
ಭವನ ನಿರ್ಮಾಣಕ್ಕೆ ಪ್ರತ್ಯೇಕ ಸಮಿತಿ:
ಡಾ. ಕಯ್ಯಾರ ಅವರ ಹೆಸರಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರಕ ಸಾಂಸ್ಕøತಿಕ ಕೇಂದ್ರದ ನಿರ್ಮಾಣಕಾರ್ಯಗಳು ಪ್ರತ್ಯೇಕ ಸಮಿತಿ ಮೇಲ್ನೋಟ ವಹಿಸಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕವಿತಾ ಕುಟೀರ ಟ್ರಸ್ಟ್‍ನ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ನಿರ್ಮಾಣ ಕಾಮಗಾರಿಯ ಮೇಲ್ನೋಟ ವಹಿಸಲಿದೆ. ಜತೆಗೆ ಜಿಲ್ಲಾ ಪಂಚಾಯಿತಿಯ ನಿರ್ಮಾಣ ಮೇಲ್ವಿಚಾರಣಾ ಸಮಿತಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ಪ್ರತಿನಿಧಿಗಳು ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳೂ ಇರಲಿದ್ದಾರೆ. Pಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕವಿತಾ ಕುಟೀರ ಟ್ರಸ್ಟ್‍ನ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ನಿರ್ಮಾಣ ಕಾಮಗಾರಿಯ ಮೇಲ್ನೋಟ ವಹಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿಯ ನಿರ್ಮಾಣ ಮೇಲ್ವಿಚಾರಣಾ ಸಮಿತಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ಪ್ರತಿನಿಧಿಗಳು ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳೂ ಇರಲಿದ್ದಾರೆ. ಡಾ. ಕಯ್ಯಾರ ಅವರ ನಿವಾಸ ಕವಿತಾಕುಟೀರ ಸನಿಹ ಕಯ್ಯಾರ ಮನೆಯವರು ಜಿಪಂಗೆ ಹಸ್ತಾಂತರಿಸಿರುವ 25ಸೆಂಟ್ ಜಾಗದಲ್ಲಿ ಸುಸಜ್ಜಿತ ಕನ್ನಡಭವನ ತಲೆಯೆತ್ತಲಿದೆ.