ಬ್ಯಾಂಕಾಕ್: ಗಡಿಯಲ್ಲಿ ನಡೆದ ಘಟನೆಗಳಿಂದಾಗಿ ಭಾರತ ಮತ್ತು ಚೀನಾದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಚೀನಾ- ಭಾರತದ ಗಡಿ ಭಾಗದಲ್ಲಿ ಚೀನಾ ಮಾಡಿದ ಕೆಲಸಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದ್ದು, ಉಭಯ ದೇಶಗಳೂ ಕೈಜೋಡಿಸದೇ ಇದ್ದಲ್ಲಿ ಏಷ್ಯಾದ ಶತಮಾನವಾಗುವುದಿಲ್ಲ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಾಕ್ ನ ಪ್ರತಿಷ್ಠಿತ ಚುಲಾಂಗ್‌ಕಾರ್ನ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ವೇಳೆ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಈ ಅಭಿಪ್ರಾಯವನ್ನು ಜೈಶಂಕರ್ ಹಂಚಿಕೊಂಡಿದ್ದಾರೆ.
"ಭಾರತ ಹಾಗೂ ಚೀನಾ ಒಟ್ಟಿಗೆ ಬಂದಾಗ ಏಷ್ಯಾದ ಶತಮಾನ ಘಟಿಸುತ್ತದೆ. ಇಲ್ಲದೇ ಇದ್ದಲ್ಲಿ ಆ ಕನಸು ನನಸಾಗುವುದು ಕಷ್ಟ" ಎಂದು ಜೈ ಶಂಕರ್ ಹೇಳಿದ್ದಾರೆ.
"ಚೀನಾ ಗಡೊಯಲ್ಲಿ ಮಾಡಿದ ಕೆಲಸಗಳಿಂದ ಈಗ ಭಾರತ-ಚೀನಾ ಸಂಬಂಧ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ, ಒಂದು ವೇಳೆ ಚೀನಾ-ಭಾರತ ಒಟ್ಟಿಗೆ ಬರುವುದಕ್ಕೆ ಕೇವಲ ಶ್ರೀಲಂಕಾ ಮಾತ್ರ ಅಲ್ಲ ಬಹಳಷ್ಟು ಕಾರಣಗಳಿವೆ" ಎಂದು ಜೈಶಂಕರ್ ಹೇಳಿದ್ದಾರೆ.