ಮಂಜೇಶ್ವರ: ಮೀಯಪದವು ಶಾಲಾ ಮೈದಾನದಲ್ಲಿ ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಕಾಸರಗೋಡು ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸªದÀ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಜರಗಿತು. ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ರಘುವೀರ್ ರಾವ್ ವಹಿಸಿದ್ದರು. ಮಿಯಪದವು ಯುಪಿ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಅಧ್ಯಾಪಕ ಕೃಷ್ಣಶರ್ಮ, ಟಿ ಎಸ್ ಸಿ ಅಧ್ಯಕ್ಷ ಸದಾಶಿವ ಬಾಲಮಿತ್ರ, ಪ್ರದಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಗೌರವಾಧ್ಯಕ್ಷ ಉದಯಕುಮಾರ ಶೆಟ್ಟಿ, ಪ್ರಶಾಂತ್ ರೈ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪಂದ್ಯಾಟದಲ್ಲಿ ಯುನೈಟೆಡ್ ಟೀಚರ್ಸ್ ಕುಂಬಳೆ ಪ್ರಥಮ, ಮಾಸ್ಟರ್ ಸ್ಟೈಕರ್ಸ್ ಮಂಜೇಶ್ವರ ದ್ವಿತೀಯ, ರಾಯಲ್ ಟೀಚರ್ಸ್ ಕಾಸರಗೋಡು ತೃತೀಯ, ಮಾಸ್ಟರ್ ಹಿಟ್ಟರ್ಸ್ ಮಂಜೇಶ್ವರ ಚತುರ್ಥ ಸ್ಥಾನ ಪಡೆಯಿತು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ವಿ. ದಿನೇಶ್ ಬಹುಮಾನ ವಿತರಿಸಿದರು. ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ಬೇಳ ಸ್ವಾಗತಿಸಿ, ಉಪಾಧ್ಯಕ್ಷ ಅಶೋಕ್ ಕೊಡ್ಲಮೊಗರು ವಂದಿಸಿದರು. ಸುನಿಲ್ ಮಾಸ್ತರ್ ಮುಂಡಿತ್ತಡ್ಕ ನಿರ್ವಹಿಸಿದರು.