ತಿರುವನಂತಪುರ : ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕವರ್ ಪೋಟೋವನ್ನು ಬದಲಾಯಿಸಿದ್ದಾರೆ.
ರಾಷ್ಟ್ರಧ್ವಜದ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಕವರ್ ಪೋಟೋವನ್ನಾಗಿ ಮಾಡಿಕೊಂಡಿದ್ದಾರೆ.
ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಝ್ ಕೂಡ ಫೇಸ್ ಬುಕ್ ನಲ್ಲಿ ತಮ್ಮ ಕವರ್ ಪೋಟೋ ಬದಲಿಸಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ರಾಷ್ಟ್ರಧ್ವಜದ ಫೆÇೀಟೋಗೆ ಬದಲಾಯಿಸುವಂತೆ ಎಲ್ಲರಿಗೂ ಕೇಳಿಕೊಂಡಿದ್ದರು. ಇದರ ಭಾಗವಾಗಿ, ಪ್ರಮುಖ ನಾಯಕರು ಮತ್ತು ನಟರು ತಮ್ಮ ಪ್ರೊಫೈಲ್ ಚಿತ್ರಗಳನ್ನು ಬದಲಾಯಿಸಿರುವರು.
ಹರ್ ಘರ್ ತಿರಂಗದ ಅಂಗವಾಗಿ ಇಂದು ದೇಶದ ಮನೆಮನೆಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಿತು. ಮಲಯಾಳಂನ ಪ್ರಮುಖ ನಟರು ಮತ್ತು ರಾಜಕೀಯ ಮುಖಂಡರು, ಕಾರ್ಯಕರ್ತರು ಈಗಾಗಲೇ ಧ್ವಜಾರೋಹಣ ಮಾಡಿದ್ದಾರೆ.