ತಿರುವನಂತಪುರ: ಕರಿಯವÀಟ್ಟಂ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿಹಾಕಿ ಬೀಗ ಜಡಿದು ಎಸ್‍ಎಫ್‍ಐ ಕಾರ್ಯಕರ್ತರಿಂದ ಹಿಂಸಾಚಾರ ನಡೆದಿದೆ.
ಮಾಹಿತಿ ಪಡೆದು ಕಾಲೇಜಿಗೆ ಬಂದ ಪೋಲೀಸರ ಮೇಲೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕಳೆದ ವರ್ಷ ಶಿಸ್ತು ಕ್ರಮದ ಮೂಲಕ ನೇರವಾಗಿ ಉಚ್ಚಾಟನೆಗೊಂಡ ನಾಯಕನಿಗೆ ಏಕಗವಾಕ್ಷಿ ಮೂಲಕ ಕಾಲೇಜಿಗೆ ಪ್ರವೇಶಿಸಲು ಪ್ರಾಂಶುಪಾಲರು ಮುಂದಾದಾಗ ಎಸ್‍ಎಫ್‍ಐ ಕಾರ್ಯಕರ್ತರು ಕ್ಯಾಂಪಸ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್‍ಎಫ್‍ಐ ಘಟಕದ ಮಾಜಿ ಕಾರ್ಯದರ್ಶಿ ರೋಹಿತ್ ರಾಜ್ ಮತ್ತೊಂದು ವಿಷಯಕ್ಕೆ ಮರು ಪ್ರವೇಶ ಕೋರಿದರು. ಪ್ರಾಂಶುಪಾಲರು ಬಂದಾಗ ಎಸ್‍ಎಫ್‍ಐ ಕಾರ್ಯಕರ್ತರು ಕೊಠಡಿಗೆ ಬೀಗ ಹಾಕಿದರು. ಗೇಟ್ ಮುಂದೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ಸಂಘಟಿತ ಎಸ್‍ಎಫ್‍ಐ ಕಾರ್ಯಕರ್ತರು ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು. ಈ ಸಂಘರ್ಷದಲ್ಲಿ ಕಳಕೂಟಂನ ಸಹಾಯಕ ಕಮಿಷನರ್ ಸೇರಿದಂತೆ 4 ಪೋಲೀಸರು ಗಾಯಗೊಂಡಿದ್ದಾರೆ.
ಹಿಂಸಾಚಾರವನ್ನು ನಿಯಂತ್ರಿಸಲು ಎಸ್‍ಎಫ್‍ಐ ಕಳಕೂಟಂ ಪ್ರದೇಶ ಸಮಿತಿ ಕಾರ್ಯದರ್ಶಿ ಅಮಿತ್, ಜಂಟಿ ಕಾರ್ಯದರ್ಶಿ ಶೈಜು ಮತ್ತು ಏರಿಯಾ ಅಧ್ಯಕ್ಷ ರಾಹುಲ್ ಅವರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಪ್ರಾಂಶುಪಾಲರನ್ನು ಪೋಲೀಸ್ ವಾಹನದಲ್ಲಿ ಕಾಲೇಜಿನ ಹೊರಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು.
ಕರಿಯವಟ್ಟಂ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿಹಾಕಿ ಬೀಗ ಜಡಿದ ಎಸ್.ಎಫ್.ಐ. ಕಾರ್ಯಕರ್ತರು: ಪೋಲೀಸರ ಮೇಲೂ ಹಲ್ಲೆ
0
ಆಗಸ್ಟ್ 23, 2022
Tags