ಎರ್ನಾಕುಳಂ: ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳನ್ನು ನೆಡುಂಬಶ್ಶೇರಿಯತ್ತ ಹಿಂತಿರಿಗಿಸಲಾಗಿದೆ. ಕರಿಪ್ಪೂರ್ ನಲ್ಲಿ ಇಳಿಯ ಬೇಕಿದ್ದ ಆರು ವಿಮಾನಗಳನ್ನು ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಉತ್ತರ ಕೇರಳದಲ್ಲಿ ಹಲವು ಗಂಟೆಗಳಿಂದ ಭಾರೀ ಮಳೆ ಮುಂದುವರಿದಿದೆ.
ಶಾರ್ಜಾದಿಂದ ಆಗಮಿಸಿದ ಗಲ್ಫ್ ಏರ್ ವಿಮಾನ, ಬಹ್ರೇನ್ ವಿಮಾನ ಮತ್ತು ದೋಹಾದಿಂದ ಕತಾರ್ ಏರ್ವೇಸ್ ವಿಮಾನ, ಅಬುಧಾಬಿಯಿಂದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ, ಶಾರ್ಜಾದಿಂದ ಏರ್ ಅರೇಬಿಯಾ ವಿಮಾನ ನೆಡುಂಬಶ್ಶೇರಿಯಲ್ಲಿ ಬಂದಿಳಿಯಿತು.
ಕರಿಪ್ಪೂರ್ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದೆ. ಹಾಗಾಗಿ ಕೆಟ್ಟ ವಾತಾವರಣದಲ್ಲಿ ಇಲ್ಲಿ ವಿಮಾನಗಳನ್ನು ಇಳಿಸುವುದು ಕಷ್ಟ. ಈ ಪರಿಸ್ಥಿತಿಯಲ್ಲಿ ವಿಮಾನಗಳನ್ನು ನೆಡುಂಬಶ್ಶೇರಿ ಕಡೆಗೆ ತಿರುಗಿಸಲಾಯಿತು. ಹವಾಮಾನ ಅನುಕೂಲಕರವಾಗಿದ್ದರೆ ಈ ವಿಮಾನಗಳನ್ನು ಕರಿಪ್ಪೂರಿಗೆ ಮತ್ತೆ ತರಲಾಗುತ್ತದೆ. ಇಲ್ಲವಾದಲ್ಲಿ ಪ್ರಯಾಣಿಕರಿಗೆ ಇತರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಟ್ಟ ಹವಾಮಾನ; ಕರಿಪ್ಪೂರ್ ಗೆ ಬಂದಿಳಿಯಬೇಕಾದ ಆರು ವಿಮಾನಗಳು ನೆಡುಂಬಶ್ಶೇರಿಯಲ್ಲಿ ಲ್ಯಾಂಡ್
0
ಆಗಸ್ಟ್ 04, 2022