HEALTH TIPS

ಡಾ. ವಸಂತಕುಮಾರ ಪೆರ್ಲ ಅವರ ಮಾಧ್ಯಮಮಾರ್ಗ ಕೃತಿ ಬಿಡುಗಡೆ


              ಮಂಗಳೂರು: ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ಮಾಧ್ಯಮ ಸಂಬಂಧಿ ಲೇಖನಗಳ ಸಂಪುಟ ಮಾಧ್ಯಮಮಾರ್ಗವನ್ನು ಬುಧವಾರ, ದಿನಾಂಕ 24ರಂದು ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಕುಲಪತಿ ಪೆÇ್ರ. ಪಿ. ಎಸ್. ಎಡಪಡಿತ್ತಾಯ ಲೋಕಾರ್ಪಣೆಗೊಳಿಸಿದರು.
        ಎಲ್ಲ ರೀತಿಯ ಮಾಧ್ಯಮಗಳ ಬಹುಮುಖಗಳನ್ನು ಈ ಕೃತಿ ವಿಶ್ಲೇಷಿಸಿ ಚರ್ಚೆಗೆ ಒಳಪಡಿಸುತ್ತದೆ. ಕಳೆದ ನಲವತ್ತೈದು ವರ್ಷಗಳಿಂದ ಸಾಹಿತ್ಯ ಮತ್ತು ಮಾಧ್ಯಮರಂಗದಲ್ಲಿ ದುಡಿಯುತ್ತಿರುವ ಡಾ. ಪೆರ್ಲ ಈ ಕೃತಿ ರಚಿಸಿರುವುದರಿಂದ ಇದಕ್ಕೊಂದು ಅಧಿಕೃತತೆ ಪ್ರಾಪ್ತವಾಗಿದೆ. ಇದನ್ನು ಪ್ರಕಟಿಸಿರುವುದು ನಮ್ಮ ಪ್ರಸಾರಾಂಗದ ಸುಯೋಗ ಎಂದು ಈ ಸಂದರ್ಭದಲ್ಲಿ ಕುಲಪತಿಗಳು ಹೇಳಿದರು.
             ಆಸಕ್ತ ಓದುಗರಿಗೆ ಮಾತ್ರವಲ್ಲದೆ ಮಾಧ್ಯಮದ ವಿದ್ಯಾರ್ಥಿಗಳಿಗೆ ಪೂರಕಪಠ್ಯವಾಗಿ ಶೈಕ್ಷಣಿಕ ಮಹತ್ವವೂ ಇದಕ್ಕಿದೆ. ಮಾಧ್ಯಮಕ್ಷೇತ್ರಕ್ಕೆ ಇದೊಂದು ಅತ್ಯುತ್ತಮ ಕೊಡುಗೆ ಎಂದು ಅವರು ಹೇಳಿದರು.
            ಲೇಖಕರಾದ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡುತ್ತ ಸಮೂಹ ಮಾಧ್ಯಮಗಳಾದ ಪತ್ರಿಕೆ, ಆಕಾಶವಾಣಿ,  ದೂರದರ್ಶನಗಳಲ್ಲದೆ ಖಾಸಗಿ ಎಫ್. ಎಂ. ರೇಡಿಯೋ, ಟಿ.ವಿ. ಚಾನೆಲ್ ಗಳು, ಸಮುದಾಯ ಬಾನುಲಿ ಮತ್ತು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ವಾಟ್ಸ್ ಆ್ಯಪ್, ಟ್ವಿಟರ್, ಇನ್'ಸ್ಟಗ್ರಾಮ್ ಬಗ್ಗೆ ತಾತ್ವಿಕವಾದ ತಲಸ್ಪರ್ಶಿ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಮಾಧ್ಯಮಗಳ ಬಗೆಗಿನ ಒಟ್ಟು ನೋಟ ಇಲ್ಲಿ ಸಿಗಬಲ್ಲದು ಎಂದರು.
           ಸಿಂಡಿಕೇಟ್ ಸದಸ್ಯ ರಮೇಶ್ ಕೆ.,  ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ., ಪರೀಕ್ಷಾಂಗ ಕುಲಸಚಿವ ಪೆÇ್ರ. ಪಿ. ಎಲ್. ಧರ್ಮ, ಹಣಕಾಸು ಅಧಿಕಾರಿ ಪೆÇ್ರ. ಜಯಪ್ಪ, ಪ್ರಸಾರಾಂಗ ನಿರ್ದೇಶಕ ಪೆÇ್ರ. ಸೋಮಣ್ಣ ಹೊಂಗಳ್ಳಿ, ಸಹನಿರ್ದೇಶಕ ಡಾ. ಧನಂಜಯ ಕುಂಬಳೆ, ಆಡಳಿತ ಅಭಿವೃದ್ಧಿ ವಿಭಾಗ ಮುಖ್ಯಸ್ಥೆ ವೀಣಾ, ಸಂಧ್ಯಾ, ವೈಶಾಲಿ, ಪ್ರಸಾರಾಂಗದ ಜೆಸ್ಸಿ ಮೇರಿ ಡಿ ' ಸೋಜ, ಭರತ್, ಲೋಲಾಕ್ಷ, ಕನ್ನಡ ವಿಭಾಗದ ಚಂದ್ರಶೇಖರ ಎಂ. ಬಿ., ಹರಿಪ್ರಸಾದ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೆÇ್ರ. ಸೋಮಣ್ಣ ಸ್ವಾಗತಿಸಿದರು. ಧನಂಜಯ ಕುಂಬಳೆ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries