ಪೆರ್ಲ: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಅನಾರೋಗ್ಯಪೀಡಿತನಾದ ಪುತ್ರನನ್ನು ಕಳೆದುಕೊಂಡ ವ್ಯಥೆ ದೂರಾಗುವ ಮೊದಲೇ, ಶೇಣಿ ಗ್ರಾಮದ ಶೇರಮೆ ನಿವಾಸಿ ವಾಸುದೇವ ನಾಯಕ್ ಅವರಿಗೆ ಬ್ಯಾಂಕ್ ಸಾಲ ಮರುಪಾವತಿಸುವ ಬಗ್ಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ದೂರಿಗೆ ಸ್ಪಂದಿಸದಿದ್ದಲ್ಲಿ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಕಾಲ್ನಡೆ ಮೂಲಕ ತೆರಳಿ, ಸೆಕ್ರೆಟೇರಿಯೆಟ್ ಎದುರು ನಿರಾಹಾರ ಸತ್ಯಾಗ್ರಹ ನಡೆಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ವಾಸುದೇವ ನಾಯಕ್ ಅವರು ತಮ್ಮ ಪುತ್ರ ಶ್ರೇಯಸ್ ಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ಪ್ರೈಮರಿ ಕೋಓಪರೇಟಿವ್ ಅಗ್ರಿಕಲ್ಚರ್ ಏಂಡ್ ರೂರಲ್ ಡೆವೆಲಪ್‍ಮೆಂಟ್ ಬ್ಯಾಂಕ್‍ನಿಂದ ಕೃಷಿಗಾಗಿ ಪಡೆದಿದ್ದ 2.90ಲಕ್ಷ ರೂ. ಮೊತ್ತವನ್ನು ಮರುಪಾವತಿಸಲಾಗದೆ ಸಂಕಷ್ಟ ಎದುರಿಸುವಂತಾಗಿತ್ತು. ಈ ಮಧ್ಯೆ ಎಂಡೋಸಲ್ಫಾನ್ ಸಂತ್ರಸ್ತರ ಪುರ್ನಸತಿ ಯೋಜನೆಯನ್ವಯ ಈ ಮೊತ್ತ ಮನ್ನಾಗೊಳಿಸುವ ಬಗ್ಗೆ ಈ ಹಿಂದೆಯೇ ಶಿಫಾರಸು ಮಾಡಲಾಗಿದ್ದರೂ, ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಪೆರ್ಲ ಪೇಟೆಯಲ್ಲಿ ತನ್ನನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಬ್ಯಾಂಕ್ ಸಾಲ ತಕ್ಷಣ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡಹೇರುತ್ತಿದ್ದಾರೆ. ಎಂಡೋಸಲ್ಫಾನ್ ಸೆಲ್ ಮೂಲಕ ಸಾಲದ ಮೊತ್ತ ಮನ್ನಾಮಾಡಲಾಗಿದ್ದರೂ, ಅಧಿಕಾರಿಗಳು ಸಾಲದ ಹಣ ವಸೂಲಿ ನೆಪದಲ್ಲಿ ತನ್ನನ್ನು ಬೇಟೆಯಾಡುತ್ತಿದ್ದಾರೆ. ಸಾರ್ವಜನಿಕವಾಗಿ ತೇಜೋವಧೆ ನಡೆಸುತ್ತಿರುವುದಾಗಿ ಜಿಲ್ಲಾಧಿಖಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತಗೆ ಬ್ಯಾಂಕ್ ಅಧಿಕಾರಿಗಳ: ಕಿರುಕುಳ: ಡಿಸಿಗೆ ದೂರು, ರಾಜಧಾನಿಯಲ್ಲಿ ಸತ್ಯಾಗ್ರಹಕ್ಕೆ ತೀರ್ಮಾನ
0
ಆಗಸ್ಟ್ 16, 2022
Tags