ಕೊಚ್ಚಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇರಳ ಹೈಕೋರ್ಟ್ ಕೂಡ ತ್ರಿವರ್ಣ ಧ್ವಜದಿಂದ ಬೆಳಗಿತು. ರಾಷ್ಟ್ರಧ್ವಜದ ತ್ರಿವರ್ಣ ಧ್ವಜದಲ್ಲಿ ಅಲಂಕೃತವಾಗಿರುವ ನ್ಯಾಯಾಲಯದ ಸಂಕೀರ್ಣವನ್ನು ನೋಡಲು ರಾತ್ರಿಯೂ ಅನೇಕ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥವಾಗಿ ಸ್ಮೃತಿ ಸ್ತೂಪವನ್ನೂ ನಿರ್ಮಿಸಲಾಗಿದೆ. ಹೈಕೋರ್ಟ್‍ನ ಸಂಪೂರ್ಣ ಮಹಡಿಯನ್ನು ದೀಪಗಳಿಂದ ಅಲಂಕರಿಸಲಾಗಿದೆ. ಹೈಕೋರ್ಟಿ ಈ ರೀತಿ ಕಂಗೊಳಿಸುತ್ತಿರುವುದು ಅಪರೂಪದ ದೃಶ್ಯ. ಹಾಗಾಗಿ ಸಂಜೆಯ ವೇಳೆಗೆ ಸುತ್ತಮುತ್ತಲಿನ ನಿವಾಸಿಗಳು ಸೇರಿದಂತೆ ಹಲವರು ಈ ದೃಶ್ಯವನ್ನು ನೋಡಲು ಬಂದಿದ್ದರು.
ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ, ದೇಶದ ಸರ್ಕಾರಿ ಕಚೇರಿಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳು ತ್ರಿವರ್ಣ ಧ್ವಜದಿಂದ ಬೆಳಗುತ್ತಿವೆ.
ಆಜಾದಿ ಕಾ ಅಮೃತ ಮಹೋತ್ಸವ; ತ್ರಿವರ್ಣದ ಕೋರೈಸುವ ಬೆಳಕಿಂದ ಕಂಗೊಳಿಸಿದ ಕೇರಳ ಹೈಕೋರ್ಟ್
0
ಆಗಸ್ಟ್ 14, 2022