HEALTH TIPS

ಪೋಷಕರೇ ಮಕ್ಕಳಲ್ಲಿ ಈ ರೀತಿಯ ವರ್ತನೆ ಕಂಡರೆ ಅಲರ್ಟ್ ಆಗಿ!

ಸಣ್ಣ ಹುಡುಗ ತಾಯಿಯನ್ನು ಕೊಂದ, ಸಣ್ಣ ಹುಡುಗ ಆತ್ಮಹತ್ಯೆ ಮಾಡಿಕೊಂಡ ಎನ್ನುವ ಸುದ್ದಿಯನ್ನು ನಾವು ದಿನ ನಿತ್ಯ ನ್ಯೂಸ್ ಪೇಪರ್ ನಲ್ಲಿ ಓದುತ್ತಿರುತ್ತೇವೆ. ಓದಿ ಅಲ್ಲಿಯೇ ಬಿಟ್ಟು ಬಿಡುತ್ತೇವೆ. ಆದರೆ ನಿಮಗೊಂದು ಗೊತ್ತಿರಲಿ. ಈ ರೀತಿಯ ಘಟನೆಗಳು ನಡೆಯೋದು ಮಾನಸಿಕ ಆರೋಗ್ಯದ ಸ್ಥಿತಿ ಸರಿ ಇಲ್ಲದಿದ್ದರೆ ಮಾತ್ರ. ಹೌದು. ಇಂದಿನ ಮಕ್ಕಳು ಓದು, ಪಠ್ಯೇತರ ಚಟುವಟಿಕೆ ಬದಲು ಸಾಮಾಜಿಕ ಜಾಲತಾಣದ ದಾಸರಾಗುತ್ತಿದ್ದಾರೆ. ಇದರ ಎಫೆಕ್ಟ್ ನಿಂದ ಮಕ್ಕಳು ಒತ್ತಡ, ಖಿನ್ನತೆಗೆ ಜಾರುತ್ತಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ರೀತಿಯ ಮಾನಸಿಕ ಅನಾರೋಗ್ಯ ಮಕ್ಕಳ ಭವಿಷ್ಯವನ್ನೇ ಹಾಳು ಮಾಡುತ್ತಿದೆ.

ಹೀಗಾಗಿ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ನಡೆ-ನುಡಿ ಬಗ್ಗೆ ಗಮನವಹಿಸಬೇಕು. ಯಾಕೆಂದ್ರೆ ಏನಾದ್ರೂ ಸಮಸ್ಯೆ ಮಾಡಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಪೋಷಕರು ಇರಬೇಕು. ಹಾಗಾದ್ರೆ ಪೋಷಕರು ಮಕ್ಕಳ ಮಾನಸಿಕ ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಯಾವ ರೀತಿಯ ವರ್ತನೆ ಅವರು ಸಮಸ್ಯೆಯಲ್ಲಿದ್ದಾರೆ ಎಂದು ತೋರಿಸುತ್ತದೆ?

ಈ ರೀತಿ ಇದ್ದರೆ ಪೋಷಕರು ಮಾಡಬೇಕಾದ ಕೆಲಸವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಕ್ಕಳು ಅನುಭವಿಸಬಹುದಾದ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು!

ಖಿನ್ನತೆ

ಮೂಡ್ ಸ್ವಿಂಗ್

ಒತ್ತಡ ಮತ್ತು ಆತಂಕ

ಮತಿವಿಕಲ್ಪ ಸಾಮಾಜಿಕ ಪ್ರತ್ಯೇಕತೆ

ನಿದ್ರಾಹೀನತೆ

ಅನೋರೆಕ್ಸಿಯಾ ಮತ್ತು ಬುಲಿಮಿಯಾ

ಡ್ರಗ್ಸ್ ಮತ್ತು ಆಲ್ಕೋಹಾಲ್ ನಂತಹ ಮಾದಕ ವ್ಯಸನ

ಈ ಮೇಲಿನವುಗಳು ಸದ್ಯ ಮಕ್ಕಳು ಅನುಭವಿಸಬಹುದಾದ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಾಗಿದೆ. ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಮಕ್ಕಳಲ್ಲಿ ಕೆಲವು ಬದಲಾವಣೆಗಳನ್ನು ಪೋಷಕರು ಗಮನಿಸಬಹುದಾಗಿದೆ. ಯಾಕೆಂದರೆ ಸಣ್ಣದರಿಂದ ಪೋಷಕರು ಮಕ್ಕಳೊಂದಿಗೆ ಇರುತ್ತಾರೆ. ಅವರ ಖುಷಿ, ನೋವು ಅರಿತಿರುತ್ತಾರೆ. ಹೀಗಾಗಿ ಈ ರೀತಿಯ ಯಾವುದೇ ಸಮಸ್ಯೆ ಅವರೊಂದಿಗೆ ಇದೆ ಎಂದು ಸುಲಭವಾಗಿ ಕಂಡು ಹಿಡಿಯಬಹುದು. ಉದಾಹರಣೆಗೆ ನಿಮ್ಮ ಮಕ್ಕಳು ರಾತ್ರಿ ಲೇಟ್ ಆಗಿ ಮನೆಗೆ ಬರುತ್ತಿದ್ದಾರೆ. ಊಟ ಮಾಡದೆ ಮಲಗುತ್ತಿದ್ದಾರೆಂದರೆ ಅವರು ಮಾದಕ ವ್ಯಸನ ಹಾಗೂ ಮದ್ಯಪಾನಕ್ಕೆ ದಾಸರಾಗಿದ್ದಾರೆ ಎಂದರ್ಥ.


 

ಮಕ್ಕಳ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಗುರುತಿಸುವುದು ಹೇಗೆ?

*ನಿಮ್ಮ ಮಕ್ಕಳು ಯೋಚಿಸುವ ವಿಧಾನದಲ್ಲಿ ಬದಲಾವಣೆಯಾಗುತ್ತಿದೆ ಎಂದು ಗೊತ್ತಾದರೆ ಅದು ಅಸ್ವಸ್ಥತೆ, ಅನಾರೋಗ್ಯ ಎಂದರ್ಥ. ಶಾಲೆಯಲ್ಲಿ ಮಕ್ಕಳು ಕಲಿಕೆ, ಸಾಧನೆಯಲ್ಲಿ ಹಿಂದೆ ಬಿದ್ದರೆ ತಮ್ಮನ್ನು ತಾವೇ ಟೀಕಿಸುತ್ತಿದ್ದರೆ, ಋಣಾತ್ಮಕ ಯೋಚನೆಗಳು, ತಮ್ಮನ್ನು ತಾವು ಕೀಳು ಎಂದು ಭಾವಿಸಿಕೊಳ್ಳುವುದು ಇವೆಲ್ಲ ಮಾನಸಿಕ ಅನಾರೋಗ್ಯದ ಸೂಚನೆಗಳು.

*ಮಕ್ಕಳ ಯೋಚನೆಯಲ್ಲಿ ಬದಲಾವಣೆಯಾದರೆ ಅವರ ವರ್ತನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಮಕ್ಕಳಿಂದ ಹೇಗೆ ಬರುತ್ತದೆ ಎಂದು ಗಮನಿಸುತ್ತಿರಬೇಕು. ಒಂಟಿಯಾಗಿ ಕುಳಿತುಕೊಳ್ಳುವುದು, ಸಣ್ಣಪುಟ್ಟ ವಿಷಯಗಳಿಗೆ ಅಳುವುದು, ಸಿಟ್ಟು ಮಾಡಿಕೊಳ್ಳುವುದು, ಚಟುವಟಿಕೆಗಳಲ್ಲಿ, ತಿನ್ನುವುದರಲ್ಲಿ, ಆಟ ಪಾಠಗಳಲ್ಲಿ ನಿರಾಸಕ್ತಿ ಕಂಡುಬಂದರೆ, ನಿದ್ದೆ ಸರಿ ಮಾಡದಿದ್ದರೆ ಅದು ಮಾನಸಿಕ ಕಾಯಿಲೆಗೆ ಎಡೆಮಾಡಿಕೊಡಬಹುದು.

ಪೋಷಕರು ಮಾಡಬೇಕಾಗಿರುವುದು ಏನು?

ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿರೋದ್ರಿಂದ ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅನೇಕ ಮಕ್ಕಳು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರು ಅದು ಪೋಷಕರ ಅರಿವಿಗೆ ಬರೋದಿಲ್ಲ. ಹೀಗಾಗಿ ಈ ಬಗ್ಗೆ ಗಮನವನ್ನು ಪೋಷಕರು ಕೊಡಬೇಕು.

ಮಕ್ಕಳ ಜೊತೆ ಮಾತುಕತೆ!

ಮಕ್ಕಳ ಜೊತೆ ಪೋಷಕರು ಚೆನ್ನಾಗಿ ಮಾತನಾಡಬೇಕು. ನಿತ್ಯವೂ ಅವರ ದಿನಚರಿ ಬಗ್ಗೆ ಮಾಹಿತಿ ಪಡೆಯುವ ರೀತಿಯಲ್ಲಿ ಮಾತುಕತೆ ಇರಬೇಕು. ಪೋಷಕರು ಎಂದರೆ ಫ್ರೆಂಡ್ಸ್ ಎನ್ನುವ ಭಾವನೆ ಅವರಲ್ಲಿ ಮೂಡಬೇಕು. ಹೀಗಾದಲ್ಲಿ ಮಕ್ಕಳು ಕೂಡ ತಮಗೆ ಆಗುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ತಾವು ಖಿನ್ನತೆಗೆ ಒಳಗಾಗಿದ್ದರೂ ಅದನ್ನು ಬಹಿರಂಗವಾಗಿ ಪೋಷಕರ ಬಳಿ ಹೇಳಿಕೊಳ್ಳುತ್ತಾರೆ.

ಸರಿಯಾದ ಚಿಕಿತ್ಸೆ!

ಒಂದು ವೇಳೆ ಪೋಷಕರ ಗಮನಕ್ಕೆ ಬಾರದೆ ಮಕ್ಕಳ ಮಾನಸಿಕ ಆರೋಗ್ಯ ಕೆಟ್ಟಿದ್ದರೆ ದೊಡ್ಡ ಅನಾಹುತ ಮಾಡಿಕೊಳ್ಳುವ ಮುನ್ನ ಮಕ್ಕಳಿಗೆ ಸರಿಯಾದ ಚಿಕಿತ್ಸೆ ನೀಡುವ ಕೆಲಸವನ್ನು ಪೋಷಕರು ಮಾಡಬೇಕು. ಅವರಿಗೆ ಕೌನ್ಸಲಿಂಗ್ ಮೂಲಕ ಸರಿ ದಾರಿಗೆ ತರಬೇಕು.

ಮಕ್ಕಳಿಗೆ ಸಮಯ ಕೊಡಬೇಕು!

ತಾವು ಕೆಲಸದಲ್ಲಿ ಬ್ಯುಸಿಯಿದ್ದರು ಮಕ್ಕಳಿಗಾಗಿ ಸಮಯ ಮೀಸಲಿಡಬೇಕು ಅವರಿಗೆ ಕತೆಗಳನ್ನು ಹೇಳುವುದು, ಅವರ ಜೊತೆ ಸಮಯ ಕಳೆಯುವ ಮೂಲಕ ಅವರಿಗೆ ನೈತಿಕ ಬೆಂಬಲ ನೀಡಬೇಕು. ಹೀಗಿದ್ದಾಗ ಅವರು ಯಾವುದೇ ಕೆಟ್ಟ ದಾರಿ ಹಿಡಿಯುವುದಿಲ್ಲ. ಅಲ್ಲದೇ ಯಾವುದೇ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ.


 

 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries