ಅಮರಾವತಿ: 'ಶಿಕ್ಷಣದ ಕಾರ್ಖಾನೆ'ಗಳು ಅಣಬೆಗಳ ಹಾಗೆ ತಲೆ ಎತ್ತುತ್ತಿವೆ. ಅದರಿಂದ ಮಾನವ ಸಂಪನ್ಮೂಲದ ಅಪಮೌಲ್ಯೀಕರಣವಾಗುತ್ತಿದೆ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ (ಎಎನ್‌ಯು) ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, 'ನಿಜ ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹ ಶಿಕ್ಷಣದ ಮಾದರಿ ಅಭಿವೃದ್ಧಿಪಡಿಸುವುದು ಬಹಳ ಅಗತ್ಯ' ಎಂದರು.