ಬದಿಯಡ್ಕ: ನೀರ್ಚಾಲು ರತ್ನಗಿರಿಯ ಓಂಕಾರ್ ಫ್ರೆಂಡ್ಸ್ ಕ್ಲಬ್ ಮತ್ತು ಓಂಕಾರ್ ಬಾಲಗೋಕುಲ ಸಮಿತಿ ಆಶ್ರಯದಲ್ಲಿ 6ನೇ ವರ್ಷದ ಶ್ರೀ ಕ್ರಷ್ಣ ಜನ್ಮಾಪ್ಟಮಿ ಉತ್ಸವ ರತ್ನಗಿರಿ ಶ್ರೀಕುದುರೆಕ್ಕಾಳಿ ಭಗವತೀ ಕ್ಷೇತ್ರ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ರತ್ನಗಿರಿ ಕ್ಷೇತ್ರದ ಅರ್ಚಕ ನಾರಯಾಣ ಮುಖಾರಿ ಮತ್ತು ರಾಮಚಂದ್ರ ಹಾಗೂ ಕ್ಲಬ್ಬಿನ ಸದಸ್ಯ ಶ್ರೀಧರ ಉದ್ಘಾಟಿಸಿದರು.
ಸದಾಶಿವ ಮಾಸ್ತರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ನಾರಾಯಣ ಅಸ್ರ ಉಳಿಯ ಉಪಸ್ಥಿತರಿದ್ದರು. ಜಯರಾಮ ಪೆÇನ್ನೆಂಗಳ,ಶಿವರಾಮ ಮೆಣಸಿನಪಾರೆ, ಸರಿತ ಪುದುಕೋಳಿ, ಗಾಯತ್ರಿ ರತ್ನಗಿರಿ ಉಪಸ್ಥಿತರಿದ್ದರು. ಜನನಿ.ಆರ್ ಪ್ರತಿಭಾ ಪುರಸ್ಕಾರ ವಿತರಿಸಿದರು.