ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾ ಸಮಿತಿ ಸಭೆಯು ಕಾಸರಗೋಡು ನಗರಸಭಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಜರಗಿತು. ಜಿಲ್ಲಾ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯ ಉಪಾಧ್ಯಕ್ಷ ಈಶ್ವರ ರಾವ್ ಎಂ. ಸಂಘಟನೆಯ ಮುಂದಿನ ಕಾರ್ಯಕ್ರಮಗಳ ವಿವರಣೆಯನ್ನು ನೀಡುತ್ತಾ ಅಕ್ಟೋಬರ್‍ನಲ್ಲಿ ಕಾಸರಗೋಡಿನಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆನೀಡಿದರು. ಕಾರ್ಯದರ್ಶಿ ಅರವಿಂದ ಕುಮಾರ್ ಎನ್.ಕೆ.ಸ್ವಾಗತಿಸಿ, ಪದಾಧಿಕಾರಿ ಸೀತಾರಾಮ ಭಟ್ ಎಂ. ವಂದಿಸಿದರು. ನಂತರ ಮೆಡಿಸೆಪ್‍ನ ಕುರಿತು ಇರುವ ಗೊಂದಲವನ್ನು ನಿವಾರಣೆಗೊಳಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು. ನಿವೇದನೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಭರವಸೆಯನ್ನು ನೀಡಿದರು.
ಮೆಡಿಸೆಪ್ ಗೊಂದಲ ನಿವಾರಣೆಗೆ ಆಗ್ರಹ; ಮನವಿ ಸಲ್ಲಿಕೆ
0
ಆಗಸ್ಟ್ 08, 2022