HEALTH TIPS

ಚಿಗುರುಪಾದೆಯಲ್ಲಿ ತಾಳಮದ್ದಳೆ ಸಪ್ತಾಹ ಉದ್ಘಾಟನೆ


                  ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ವತಿಯಿಂದ ಮೀಯಪದವು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಕರ್ಕಟಕ ಮಾಸ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಮಂಗಳವಾರದಿಂದ ಅಗೋಸ್ತು 15ರ ವರೆಗೆ ಪ್ರತೀದಿನ ಸಂಜೆ 5 ರಿಂದ  ಯಕ್ಷಚಿಗುರು – 2022 ತಾಳಮದ್ದಳೆ ಸಪ್ತಾಹ ವಿವಿಧ ತಂಡಗಳಿಂದ ಶ್ರೀಕ್ಷೇತ್ರದಲ್ಲಿ ಜರಗುತ್ತಿದ್ದು, ಸಪ್ತಾಹವನ್ನು ಇತ್ತೀಚೆಗೆ ಉದ್ಯಮಿ, ಯಕ್ಷಧ್ರುವ ಪಟ್ಲ ಪೌಂಡೇಶನ್ ಮಂಗಳೂರು ಇದರ ಕೇಂದ್ರ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ದೀಪಬೆಳಗಿಸಿ ಉದ್ಘಾಟಿಸಿದರು.
          ಈ ಸಂದರ್ಭದಲ್ಲಿ ಮಾತನಾಡಿದ ಸದಾಶಿವ ಶೆಟ್ಟಿ ಅವರು, ನಮ್ಮಲ್ಲಿ ರಾಮಾಯಣ ಮಹಾಭಾರತ ಹಾಗೂ ಪುರಾಣ ಕತೆಗಳು ಜನ ಸಾಮಾನ್ಯರಿಗೂ ತಲಪುವಂತೆ ಮಾಡುವಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಯ ಕೊಡುಗೆ ಅಪಾರವಾದದ್ದು, ಹಳ್ಳಿ ಹಳ್ಳಿಗಳಲ್ಲೂ ಜನಸಾಮಾನ್ಯರು ಯಕ್ಷಗಾನದಮೂಲಕ  ಹಿಂದೂ ಸಂಸ್ಕøತಿಯ ಪುರಾಣ ಪುರುಷರ ಆದರ್ಶಗಳನ್ನು ತಿಳಿಯುವಂತಾಗಿದೆ, ತಾಳಮದ್ದಳೆ ಸಪ್ತಾಹದ ಮೂಲಕ ಅನೇಕ ಕಲಾವಿದರಿಗೆ ಪ್ರತಿಭೆಯನ್ನು  ಪ್ರಸ್ತುತಿಗೊಳಿಸಲು ವೇದಿಕೆ ಸಿಕ್ಕಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
       ಶ್ರೀಮಹಾಲಿಂಗೇಶ್ವರ ಸೇವಾಟ್ರಸ್ಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀಯಪದವು ಇದರ ಅಧ್ಯಕ್ಷೆ ಪ್ರೇಮಾ ಕೆ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಪ್ರಸಿದ್ದ ತಾಳಮದ್ದಳೆ ಅರ್ಥಧಾರಿ  ಹರೀಶ ಬಳಂತಿಮೊಗರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು  ತಾಳಮದ್ದಳೆಯಲ್ಲಿ ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಕಲಾವಿದನಾಗಿ ರೂಪು ಗೊಳ್ಳಬಹುದು. ಸಪ್ತಾಹಗಳು ಈ ನಿಟ್ಟಿಲ್ಲಿ ಉತ್ತಮ ವೇದಿಕೆ ಎಂದು ಹೇಳಿದರು.
     ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಇದರ ಅಧ್ಯಕ್ಷ ಶ್ರೀ ಗಣೇಶ ನಾವಡ ಮೀಯಪದವು, ಲೀಲಾವತಿ ಫಕೀರ ಶೆಟ್ಟಿ  ಕುಳೂರು ಕನ್ಯಾನ ಉಪಸ್ಥಿತರಿದ್ದರು. ಬಳಿಕ ಯಕ್ಷಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ತಂಡದವರಿಂದ ಶ್ರೀರಾಮ ಪಟ್ಟಾಭಿμÉೀಕ ತಾಳಮದ್ದಳೆ ಜರಗಿತು.



       
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries