ಎರ್ನಾಕುಳಂ: ಆಜಾದ್ ಕಾಶ್ಮೀರವನ್ನು ಉಲ್ಲೇಖಿಸಿ ಕೆಟಿ ಜಲೀಲ್ ವಿರುದ್ಧ ಕ್ರಿಶ್ಚಿಯನ್ ಸಂಘಟನೆ ಸಿಎಎಸ್‍ಎ(ಕಾಸಾ) ದೂರು ದಾಖಲಿಸಿದೆ. ಸಂಘಟನೆಯ ಅಧ್ಯಕ್ಷ ಕೆವಿನ್ ಪೀಟರ್ ಎರ್ನಾಕುಳಂ ಸೆಂಟ್ರಲ್ ಪೋಲೀಸರಿಗೆ ದೂರು ನೀಡಿದ್ದಾರೆ.
ಜಲೀಲ್ ಹೇಳಿಕೆ ಸಂವಿಧಾನಕ್ಕೆ ಅವಮಾನ ಮಾಡುವಂತಿದೆ ಎಂದು ದೂರು ದಾಖಲಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಕಾಶ್ಮೀರಕ್ಕೆ ತಮ್ಮ ಭೇಟಿಯನ್ನು ವಿವರಿಸುವ ಫೇಸ್‍ಬುಕ್ ಪೋಸ್ಟ್‍ನಲ್ಲಿ, ಜಲೀಲ್ ಕಾಶ್ಮೀರವನ್ನು ಆಜಾದ್ ಕಾಶ್ಮೀರ ಎಂದು ಉಲ್ಲೇಖಿಸಿದ್ದಾರೆ. ಘಟನೆಯ ವಿರುದ್ಧ ಕಾಸಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು. ಬಳಿಕ ಇಂದು ಪೋಲೀಸರಿಗೆ ದೂರು ನೀಡಲಾಗಿದೆ.
ಜಲೀಲ್ ಮಾಡಿರುವ ಉಲ್ಲೇಖಗಳು ದೇಶದ್ರೋಹಿ ನಿಲುವಾಗಿದೆ. ಜಲೀಲ್ ಅವರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಕಾನೂನು ಪ್ರಕಾರ ಜಲೀಲ್ ವಿರುದ್ಧ ಕೆವಿನ್ ನೀಡಿರುವ ದೂರಿನನ್ವಯ ಕ್ರಮ ಕೈಗೊಳ್ಳಬೇಕು. ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಲೀಲ್ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೆವಿನ್ ಹೇಳಿದ್ದಾರೆ. ಇದೇ ವೇಳೆ ದೂರಿನ ಮೇರೆಗೆ ಕ್ರಮ ಕೈಗೊಳ್ಳುವುದಾಗಿ ಪೋಲೀಸರು ತಿಳಿಸಿದ್ದಾರೆ.
ಆಜಾದ್ ಕಾಶ್ಮೀರ ಉಲ್ಲೇಖ; ಕೆಟಿ ಜಲೀಲ್ ವಿರುದ್ಧ ಕಾಸಾದಿಂದ ಪೋಲೀಸರಿಗೆ ದೂರು
0
ಆಗಸ್ಟ್ 17, 2022