ಶ್ರಾವಣ ಬಂತು ಶ್ರಾವಣ... ಸಡಗರವ ಹೊತ್ತು ಬಂತು ಶ್ರಾವಣ.... ಶ್ರಾವಣ ಮಾಸವೆಂದರೆ ನಮ್ಮಲ್ಲಿ ಅದೇನೋ ಸಡಗರ ಹಾಗೂ ಸಂಭ್ರಮ. ಆಷಾಢ ಮಾಸದಲ್ಲಿ ಅಷ್ಟೇನು ಫಂಕ್ಷನ್‌ಗಳಿರಲ್ಲ. ಆಷಾಢದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಅಷ್ಟೇ ಮಾಡುತ್ತಾರೆ, ಕೆಲವು ಕಡೆ ಆಷಾಢದಲ್ಲಿ ಪೂಜೆನೂ ಮಾಡುವುದಿಲ್ಲ, ಆದರೆ ಶ್ರಾವಣ ಮಾಸ ಹಾಗಲ್ಲ, ಹಬ್ಬಗಳನ್ನು ಹೊತ್ತು ತರುವ ಮಾಸವಾಗಿದೆ. ಹಬ್ಬಗಳ ಮುನ್ನುಡಿಯಾದ ನಾಗರ ಪಂಚಮಿ ಹಬ್ಬ ಕೂಡ ಇದೇ ಮಾಸದಲ್ಲಿ ಬರಲಿದೆ.
2022ರ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:
ಶ್ರಾವಣ ಮಾಸ
ಕನ್ನಡ ಶ್ರಾವಣ ಮಾಸ ಜುಕೈ 29ರಿಂದ ಶುರುವಾಗು ಆಗಸ್ಟ್ 27ರವರೆಗೆ ಇರಲಿದೆ. ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಲಕ್ಷ್ಮಿ ವ್ರತ, ರಿಗ್ ಮತ್ತು ಯಜುರ್ ಉಪಕರ್ಮ, ಶ್ರೀ ಕೃಷ್ಣ ಜಯಂತಿ ಹೀಗೆ ವಿಶೇಷ ದಿನಗಳಿವೆ.
ಈ ತಿಂಗಳಿನ ವಿಶೇಷ ದಿನಗಳ ಬಗ್ಗೆ ತಿಳಿಯೋಣ
ಮಂಗಳ ಗೌರಿ ವ್ರತ
ಮಂಗಳ ಗೌರಿ ವ್ರತವನ್ನು ಎಲ್ಲಾ ಮಂಗಳವಾರ ಮಾಡಲಾಗುವುದು. ಗೌರಿ ದೇವಿಯನ್ನು ಪೂಜಿಸಿ ಈ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಹಾಗೂ ವೈವಾಹಿಕ ಜೀವನ ಆನಂದದಿಂದ ಕೂಡಿರಲು ಆ ತಾಯಿಯ ಆಶೀರ್ವವಾದವನ್ನು ಬಯಸಿ ಈ ವ್ರತವನ್ನು ಮಾಡಲಾಗುವುದು. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ.
ಶ್ರಾವಣದಲ್ಲಿ ಏಕಾದಶಿ ಉಪವಾಸ
ಪುತ್ರದಾ ಏಕಾದಶಿ- ಆಗಸ್ಟ್ 8
ಅಜಾ ಏಕಾದಶಿ: ಆಗಸ್ಟ್ 23
ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ ಜುಲೈ 29ರಿಂದ ಆಗಸ್ಟ್ 12
ಕೃಷ್ಣ ಪಕ್ಷ: ಆಗಸ್ಟ್ 12ರಿಂದ ಆಗಸ್ಟ್ 27
ಶ್ರಾವಣ ಮಾಸದ ಹಬ್ಬಗಳು ಹಾಗೂ ಶುಭ ದಿನ
ಮಧುಶ್ರಾವಣಿ ತೃತೀಯಾ: ಜುಲೈ 31
ದ್ರುವ ಗಣಪತಿ ವ್ರತ: ಆಗಸ್ಟ್ 1
ನಾಗ ಪಂಚಮಿ: ಆಗಸ್ಟ್ 3
ಕಲ್ಕಿ ಜಯಂತಿ: ಆಗಸ್ಟ್ 3
ದ್ರುವ ಅಷ್ಟಮಿ : ಆಗಸ್ಟ್ 5
ವರಲಕ್ಷ್ಮಿ ವ್ರತ: ಆಗಸ್ಟ್ 12
ರಿಗ್ ಶ್ರಾವಣಿ: ಆಗಸ್ಟ್ 11
ರಕ್ಷಾ ಬಂಧನ: ಆಗಸ್ಟ್ 11
ಶ್ರೀ ಕೃಷ್ಣ ಜಯಂತಿ: ಆಗಸ್ಟ್ 18