ಕೋಝಿಕ್ಕೋಡ್: ವೆಲ್ಲಯ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಮಂಗಳೂರು-ತಿರುವನಂತಪುರ ಮಾವೇಲಿ ಎಕ್ಸ್‍ಪ್ರೆಸ್ ಮೇಲೆ ದಾಳಿ ನಡೆದಿದೆ.
ದಾಳಿಕೋರರು ರೈಲಿಗೆ ಸ್ಫೋಟಕಗಳನ್ನು ಎಸೆದಿದ್ದಾರೆ.
ಪ್ರಯಾಣಿಕನಾದ ಯುವಕನೋರ್ವನ ಕಾಲಿಗೆಹೊರಗಿಂದ ಸ್ಫೋಟಕ ಸಾಧನ ಎಸೆಯಲಾಗಿದ್ದು, ಬಾಗಿಲಲ್ಲಿ ನಿಂತಿದ್ದ ಅವರ ಕಾಲಿಗೆ ತಾಗಿ ಸ್ಪೋಟ ಉಂಟಾಗಿದೆ. ಯಾರಿಗೂ ಗಾಯಗಳಾಗಿಲ್ಲ. ನಂತರ ಪೋಲೀಸರು ಮೂವರ ಗುಂಪನ್ನು ಹಿಡಿದರೂ ಒಬ್ಬ ಪರಾರಿಯಾಗಿದ್ದಾನೆ. ಥನ್ಹಾಲ್ಸ್ ರಸ್ತೆಯ 16 ಮತ್ತು 17 ವರ್ಷದ ಯುವಕರನ್ನು ಬಂಧಿಸಲಾಗಿದೆ. ಅವರಿಂದ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಮತ್ತೆ ರೈಲಿಗೆ ಸ್ಪೋಟಕ ಎಸೆಯುವ ಸಿದ್ಧತೆಯೊಂದಿಗೆ ಬಂದ ತಂಡವನ್ನು ರೈಲ್ವೇ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಶನಿವಾರ ರಾತ್ರಿ 10.32ಕ್ಕೆ ಸ್ಫೋಟಕ ಎಸೆದಿದ್ದಾರೆ. ಕೇಂದ್ರ ಸಚಿವ ವಿ ಮುರಳೀಧರನ್ ಮತ್ತು ಸಚಿವ ಪಿಎ ಮುಹಮ್ಮದ್ ರಿಯಾಝ್ ಅವರು ಕೋಝಿಕ್ಕೋಡ್ ರೈಲು ನಿಲ್ದಾಣದಿಂದ ಅದೇ ರೈಲಿಗೆ ಹತ್ತಲು ಹೊರಟಿದ್ದಾಗ ದಾಳಿ ನಡೆದಿದೆ.
ವೆಲ್ಲಯ್ ನಿಲ್ದಾಣವನ್ನು ದಾಟುತ್ತಿದ್ದಂತೆ ತಾನಿಯಿಲ್ ಪ್ಲಾಟ್‍ಫಾರ್ಮ್‍ನ ಪೂರ್ವ ಭಾಗದಿಂದ ಜನರಲ್ ಕೋಚ್‍ಗೆ ಸ್ಫೋಟಕಗಳನ್ನು ಎಸೆಯಲಾಯಿತು. ಈ ವೇಳೆ ಬಾಗಿಲ ಬಳಿ ಕುಳಿತಿದ್ದ ಶಾಹುಲ್ ಹಮೀದ್ (36) ಅವರ ಶೂಗೆ ತಗುಲಿ ಅದು ಒಡೆದಿದೆ. ನಂತರ, ರೈಲು ಕೋಝಿಕ್ಕೋಡ್ ನಿಲ್ದಾಣಕ್ಕೆ ಬಂದಾಗ, ಅವರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಂಗಳೂರು-ತಿರುವನಂತಪುರ ಮಾವೇಲಿ ಎಕ್ಸ್ ಪ್ರೆಸ್ ಮೇಲೆ ಸ್ಪೋಟಕ ದಾಳಿ: ಪ್ರಯಾಣಿಕನ ಕಾಲಿಗೆ ಬಡಿದು ಸ್ಪೋಟ: ತಪ್ಪಿದ ಭಾರೀ ಅನಾಹುತ
0
ಆಗಸ್ಟ್ 15, 2022