ಕಾಸರಗೋಡು: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕಾಸರಗೋಡು ಈಸ್ಟ್ ಘಟಕ ಸಮಿತಿಯ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಕ್ಲಬ್ ಸಹಕಾರದೊಂದಿಗೆ ರಕ್ತದಾನ ಶಿಬಿರ ಉದ್ಘಾಟನೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಕಾಸರಗೋಡು ತಾಲೂಕು ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಬ್ಲಡ್ ಡೋನರ್ಸ್ ಕ್ಲಬ್ ಸಂಯೋಜಕ ಮಣಿ ಐಪೋಕಸ್ ಅಧ್ಯಕ್ಷತೆಯಲ್ಲಿ ನೆಡೆದ ಶಿಬಿರವನನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ವಹಿಸಿದ್ದರು.
ಡಿವೈಎಸ್ಪಿ ಬಾಲಕೃಷ್ಣನ್ ಅವರು ರಕ್ತದಾನಿಗಳಿಗೆ ಉಚಿತ ಆರೋಗ್ಯ ತಪಾಸಣೆ ಟೋಕನ್ ವಿತರಿಸಿದರು. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ನಿಕಾನ್ ಕಂಪನಿ ಯುಎಇ, ಆಫ್ರಿಕಾ ಬ್ರಾಂಡ್ ಅಂಬಾಸಿಡರ್ ಶಾಜಿ ಮುಹಮ್ಮದ್, ಆಸ್ಪತ್ರೆ ಅಧೀಕ್ಷಕ ರಾಜಾರಾಂ, ನೀತಿ ಲ್ಯಾಬ್ ಪ್ರಬಂಧಕ ಶಂಸುದ್ದೀನ್, ಬ್ಲಡ್ ಬ್ಯಾಂಕ್ ಪ್ರಭಾರಿ ಕವಿತಾ, ಎಕೆಪಿಎ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಸಂಜೀವ ರೈ, ಕಾಸರಗೋಡು ವಲಯ ಅಧ್ಯಕ್ಷ ರಾಜೇಂದ್ರನ್ ಉಪಸ್ಥಿತರಿದ್ದರು. ಘಟಕದ ಉಸ್ತುವಾರಿ ಕಾರ್ಯದರ್ಶಿ ವಾಮನ್ ಕುಮಾರ್ ಸ್ವಾಗತಿಸಿ, ಅಧ್ಯಕ್ಷ ಮನೀಶ್ ವಂದಿಸಿದರು.