HEALTH TIPS

ಕತಾರ್-ಕಾಸರಗೋಡು ಜಿಲ್ಲಾ ಕೆಎಂಸಿಸಿ ಸಮಿತಿಯಿಂದ ಉಬೈದ್ ಪುರಸ್ಕಾರ



                ಕಾಸರಗೋಡು: ಕತಾರ್-ಕಾಸರಗೋಡು ಜಿಲ್ಲಾ ಕೆಎಂಸಿಸಿ ಸಮಿತಿಯು ಉಬೈದ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗೆ ಡಾ. ಎಂ.ಪಿ ಶಾಫಿ ಹಾಜಿ (ಶಿಕ್ಷಣ/ಸಮಾಜಸೇವೆ) ಮತ್ತು ಆಯಿಷತ್ ಹಜೂರ (ಸಾಹಿತ್ಯ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕತಾರ್-ಕಾಸರಕೋಟ್ ಜಿಲ್ಲಾ ಕೆಎಂಸಿಸಿ ಅಧ್ಯಕ್ಷ ಲುಕ್ಮಾನುಲ್ ಹಕೀಂ ಎಂ. ಕಾಸರಗೋಡಿನಲ್ಲಿ sಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



        ಆಗಸ್ಟ್ 9 ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ಸಿಟಿ ಟವರ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಪ್ರಶಸ್ತಿ ಪ್ರದಾನ ಮಾಡುವರು. ಕತಾರ್-ಕಾಸರಕೋಟ್ ಜಿಲ್ಲಾ ಕೆಎಂಸಿಸಿ ಅಧ್ಯಕ್ಷ ಲುಕ್ಮಾನುಲ್ ಹಕೀಂ ಎಂ. ಅಧ್ಯಕ್ಷತೆ ವಹಿಸುವರು.ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಸಿ.ಟಿ.ಅಹ್ಮದಲಿ, ಜಿಲ್ಲಾಧ್ಯಕ್ಷ ಟಿ.ಇ.ಅಬ್ದುಲ್ಲಾ ಮುಂತಾದವರು ಪಾಲ್ಗೊಳ್ಳುವರು. ಪ್ರಶಸ್ತಿ  ತಲಾ 25,000 ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿರುವುದಾಗಿ  ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಕತಾರ್-ಕಾಸರಕೋಟ ಜಿಲ್ಲಾ ಕೆಎಂಸಿಸಿ ಉಪಾಧ್ಯಕ್ಷ ಹಾರಿಸ್ ಏರಿಯಲ್, ಕಾರ್ಯದರ್ಶಿ ಸಮೀರ್ ಉಡುಂಬುತಲ ಉಪಸ್ಥಿತರಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries