ತಿರುವನಂತಪುರ: ಸಚಿವ ಪಿ.ರಾಜೀವ್ ಅವರ ವಾಹನದ ಮಾರ್ಗ ಬದಲಿಸಿದ ಪೋಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಗ್ರೇಡ್ ಎಸ್‍ಐ ಎಸ್ ಎಸ್.ಸಾಬುರಾಜನ್ ಹಾಗೂ ಸಿಪಿಒ ಸುನೀಲ್ ಅವರನ್ನು ಅಮಾನತುಗೊಳಿಸಲಾಗಿದೆ.
ನೆಯ್ಯಾಟ್ಟಿಂಕರದಿಂದ ಎರ್ನಾಕುಳಂಗೆ ತೆರಳುತ್ತಿದ್ದ ವೇಳೆ ಸಚಿವರ ಮಾರ್ಗ ಬದಲಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ನಗರ ಪೋಲೀಸ್ ಆಯುಕ್ತರು ಕ್ರಮ ಕೈಗೊಂಡಿದ್ದಾರೆ. ಮಾರ್ಗ ಬದಲಾವಣೆ ಸಚಿವರಿಗೆ ಸಂಕಷ್ಟ ತಂದಿದೆ ಎಂದು ವರದಿಯಾಗಿದೆ.
ಸಚಿವರೇ ನೇರವಾಗಿ ತಿರುವನಂತಪುರಂ ಆಯುಕ್ತರಿಗೆ ಕರೆ ಮಾಡಿ ದೂರು ನೀಡಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದೆ. ಆದರೆ ರಸ್ತೆಯಲ್ಲಿನ ಟ್ರಾಫಿಕ್ ಬ್ಲಾಕ್ ಅನ್ನು ತಪ್ಪಿಸಲು ವಾಹನದ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಅಮಾನತುಗೊಂಡ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವ ಪಿ.ರಾಜೀವ್ ವಾಹನದ ಮಾರ್ಗ ಬದಲಾವಣೆ: ಇಬ್ಬರು ಪೋಲೀಸರ ಅಮಾನತು
0
ಆಗಸ್ಟ್ 13, 2022
Tags