ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು" ಕಲಾ ಸಂಘದ ವತಿಯಿಂದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರದ ಸಹಕಾರದೊಂದಿಗೆ ರಾಮಾಯಣ ಮಾಸಾಚಾರಣೆಯ ಪ್ರಯುಕ್ತ ನಡೆಯುತ್ತಿರುವ ಯಕ್ಷಚಿಗುರು -2022, ತಾಳಮದ್ದಳೆ ಸಪ್ತಾಹದ ಆರನೇ ದಿನ ಭಾನುವಾರ ನಾಡಿನ ಪ್ರಸಿದ್ದ ಕಲಾವಿದರಿಂದ ರಾವಣ ವಧೆ ಪ್ರಸಂಗ ಪ್ರಸ್ತುತಿ ಗೊಂಡಿತು.
ತಾಳಮದ್ದಳೆ ಹಿಮ್ಮೇಳದಲ್ಲಿ ಚನ್ಮಯ ಭಟ್ ಕಲ್ಲಡ್ಕ, ಭಾಸ್ಕರ ಕೋಳ್ಯೂರು ಲವಕುಮಾರ್ ಐಲ,ಶ್ರೀಕೃಷ್ಣ ಹೊಳ್ಳ ವರ್ಕಾಡಿ, ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್(ರಾವಣ), ವಾಸುದೇವ ರಂಗಾಭಟ್(ಶ್ರೀರಾಮ), ಹರೀಶ ಬಳಂತಿಮೊಗರು(ಮಂಡೋದರಿ), ಹರಿನಾರಾಯಣ ಮಯ್ಯ ಬಜೆ(ಮಾತಲಿ), ಗುರುಪ್ರಸಾದ ಹೊಳ್ಳ ತಿಂಬರ(ರಾವಣ ದೂತ) ಭಾಗವಹಿಸಿದ್ದರು.
ಚಿಗುರುಪಾದೆ ತಾಳಮದ್ದಳೆ ಸಪ್ತಾಹದಲ್ಲಿ ರಂಜಿಸಿದ ರಾವಣ ವಧೆ
0
ಆಗಸ್ಟ್ 17, 2022
Tags