ಕಾಸರಗೋಡು: ವಿಶ್ವ ಸೊಳ್ಳೆ ದಿನದ ಅಂಗವಾಗಿ ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕ ಹಾಗೂ ಕಾಸರಗೋಡು ಸÀರ್ಕಾರಿ ಕಾಲೇಜು ಎನ್.ಎಸ್.ಎಸ್. ಘಟಕದ ವತಿಯಿಂದ ವಿಚಾರ ಸಂಕಿರಣ ಹಾಗೂ ಕ್ಷೇತ್ರ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ವೆಕ್ಟರ್ ನಿಯಂತ್ರಣ ಘಟಕದಲ್ಲಿ ನಡೆದ ವಿಚಾರ ಸಂಕಿರಣವನ್ನು ಜೀವಶಾಸ್ತ್ರಜ್ಞ ಇ. ರಾಧಾಕೃಷ್ಣನ್ ನಾಯರ್ ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕಿ ಸರಸಿಜನ್ ತಂಬಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಕ ಎಂ.ಸುನೀಲ್ ಕುಮಾರ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಆಶಾಲತಾ, ಕ್ಷೇತ್ರ ಸಹಾಯಕ ಪಿ.ವಿ.ಮನೋಜ್ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿ ಕಾರ್ಯದರ್ಶಿ ವೈಶಾಖ್ ಮಾತನಾಡಿದರು. ನಂತರ ಎನ್‍ಎಸ್‍ಎಸ್ ಸ್ವಯಂಸೇವಕರು ಮತ್ತು ಆರೋಗ್ಯ ಇಲಾಖೆ ನೌಕರರು ತಂಡೋಪತಂಡವಾಗಿ ಕಾಸರಗೋಡು ನಗರಸಭೆ ವ್ಯಾಪ್ತಿಯ ಗದ್ದೆ ಪ್ರದೇಶದಲ್ಲಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಹಾಗೂ ಸೊಳ್ಳೆಮೂಲ ನಾಶದ ಕಾರ್ಯ ನಡೆಸಿದರು.
ವಿಶ್ವ ಸೊಳ್ಳೆ ದಿನಾಚರಣೆ: ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮ
0
ಆಗಸ್ಟ್ 22, 2022