ಕಾಸರಗೋಡು: ಚೆರುವತ್ತೂರಿನಲ್ಲಿ ವಿಷಯುಕ್ತ ಶವರ್ಮ ಸೇವಿಸಿ ಸಾವನ್ನಪ್ಪಿದ ವಿದ್ಯಾರ್ಥಿನಿ ದೇವನಂದ ಅವರ ತಾಯಿ ಇ.ವಿ.ಪ್ರಸನ್ನ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ರೂ. ಧನಸಹಾಯ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಕರಿವೆಳ್ಳೂರು ಎ.ವಿ.ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿನಿಯಾಗಿದ್ದ ದೇವನಂದ ಮೇ 1ರಂದು ವಿಷಾಹಾರ ಸೇವನೆಯಿಂದ ಮೃತಪಟ್ಟಿದ್ದಳು. ಈಕೆ ಕರಿವೆಳ್ಳೂರು ಚಾಂತ್ರೋತ್ ನಿವಾಸಿ ನಾರಾಯಣನ್-ಇ.ವಿ ಪ್ರಸನ್ನ ಅವರ ಏಕೈಕ ಪುತ್ರಿ. ದೇವನಂದ ಅವರ ತಾಯಿ ಪ್ರಸನ್ನ ಅವರು ತಮ್ಮ ಸಹೋದರಿ ಸೌದಾಮಿನಿಯೊಂದಿಗೆ ಚೆರುವತ್ತೂರು ಮಟ್ಟಾಳದಲ್ಲಿ ವಾಸಿಸುತ್ತಿದ್ದಾರೆ. ಆಹಾರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ತನ್ನ ಪುತ್ರಿಗೆ ಒದಗಿದ ಸ್ಥಿತಿ ಬೇರೆ ಯಾರಿಗೂ ಬರಬಾರದು ಎಂದು ಪ್ರಸನ್ನ ತಿಳಿಸಿದ್ದಾರೆ.
ದೇವನಂದ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು
0
ಆಗಸ್ಟ್ 12, 2022
Tags