ಬೆಂಗಳೂರು: ವಿಕಾಸ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ನಾಳೆ ಬೆಂಗಳೂರಿನ ಬಿ.ಬಿ.ಎಂ.ಪಿ. ಪ್ರಧಾನ ಕಾರ್ಯಾಲಯದ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಸಂಜೆ 5 ರಿಂದ ಏಕಾಂಗಿಯಾಗಿ ದ್ವಿಚಕ್ರ ವಾಹನದ ಮೂಲಕ “ತಿರಂಗ ಯಾತ್ರೆ” ಭಾರತ ಸಂಚಾರ ನಡೆಸುತ್ತಿರುವ ಕಾಸರಗೋಡು ಕುಂಬಳೆಯ ಯುವ ಸಾಧಕಿ ಅಮೃತ ಜೋಶಿ ಅವರಿಗೆ ಅಭಿನಂದನೆ ಹಾಗೂ ಕಾಸರಗೋಡು ಕನ್ನಡಿಗರ ಸಾಂಸ್ಕøತಿಕ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಯ ಕಮಿಷನರ್ ತುಷಾರ್ ಗಿರಿನಾಥ್, ಆರ್ಯನ್ ಕೇಪಿಟಲ್ ಪಾರ್ಟನ್ರ್ಸ್ ನ ಅಧ್ಯಕ್ಷ ಟಿ.ವಿ.ಮೋಹನ್ ದಾಸ್ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಹಾ ನಗರಪಾಲಿಕೆ ವಿಶೇಷ ಕಮಿಷನರ್ ಎಸ್.ರಂಗಪ್ಪ, ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ವಿಕಾಸ್ ಟ್ರಸ್ಟ್ ನ ಅಧ್ಯಕ್ಷ ರವಿನಾರಾಯಣ ಗುಣಾಜೆ ಮೊದಲಾದವರು ಉಪಸ್ಥಿತರಿದ್ದು ಮುನ್ನಡೆಸುವರು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಕಾಸರಗೋಡಿನ ಸಾಧಕರೊಂದಿಗೆ ಸಂವಾದ ಮೊದಲಾದವುಗಳು ನಡೆಯಲಿದೆ.
ನಾಳೆ ಬೆಂಗಳೂರಲ್ಲಿ ಅಮೃತ ಜೋಶಿಗೆ ಅಭಿನಂದನೆ ಹಾಗೂ ಕಾಸರಗೋಡು ಕನ್ನಡಿಗರ ಸಾಂಸ್ಕøತಿಕ ಹಬ್ಬ
0
ಆಗಸ್ಟ್ 01, 2022
Tags