ಕಾಸರಗೋಡು: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಪ್ರೌಢಶಾಲೆಯ ಕನ್ನಡ ಮಾಧ್ಯಮ ಫಿಸಿಕಲ್ ಸಯನ್ಸ್ ಕಲಿಸಲು ಆಗಮಿಸಿದ ಮಲಯಾಳ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರಿದಂತೆ 30ಮಂದಿ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಕೊಂಡಿದ್ದಾರೆ. ತಿರುವನಂತಪುರ ತೋಪ್ಪಿಲ್ ನಿವಾಸಿ ಮಹಮ್ಮದ್ ಸಾಜಿತ್ ನೀಡಿದ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಶಾಲೆಯ ಕನ್ನಡ ಮಾಧ್ಯಮಕ್ಕೆ ತಿರುವನಂತಪುರದ ಮಲಯಾಳಿ ಹಾಗೂ ಕನ್ನಡದ ಯಾವುದೇ ಪರಿಜ್ಞಾನ ಹೊಂದಿರದ ಶಿಕ್ಷಕನನ್ನು ನೇಮಿಸಿರುವುದನ್ನು ಪ್ರತಿಭಟಿಸಿ ನಡೆಯುತ್ತಿರುವ ಹೋರಾಟದ ಮಧ್ಯೆ ಶುಕ್ರವಾರ ಶಾಲೆಗೆ ಸೇರ್ಪಡೆಗೊಳ್ಳಲು ಈತ ಆಗಮಿಸಿದ್ದನು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ನಾಗರಿಕರು ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ತಳ್ಳಾಟ ನಡೆದಿದ್ದು, ಶಿಕ್ಷಕ ಗಾಯಗೊಂಡು ಕುಂಬಳೆಯ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶಿಕ್ಷಕಗೆ ಹಲ್ಲೆ ಆರೋಪ: ವಿದ್ಯಾರ್ಥಿ, ನಾಗರಿಕರಿಗೆ ಕೇಸು
0
ಆಗಸ್ಟ್ 28, 2022
Tags