ಉಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರುಗಿತು.
ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಅಂಗವಾಗಿ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಾಡಿನಾದ್ಯಂತ ಹಿರಿಯ ಪತ್ರಕರ್ತರನ್ನು ಗುರುತಿಸಿ, ಅವರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಸಂಘಟನೆ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಪ್ರದೀಪ್ ಬೇಕಲ್, ಅಚ್ಯುತ ಚೇವಾರು, ಜಗನ್ನಾಥ ಶೆಟ್ಟಿ ಪಿ.ಕೆ, ಜೆಡ್.ಎ ಕಯ್ಯಾರ್, ಕಸಾಪ ಮಂಗಳೂರು ತಾಲೂಕು ಘಟಕ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್, ಜಗನ್ನಾಥ ಶೆಟ್ಟಿ ಕುಂಬಳೆ, ಕೆಯುಡಬ್ಲ್ಯೂಜೆ ಹಾಗೂ ಇತರ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆಯುಡಬ್ಲ್ಯೂಜೆಯಿಂದ ಹಿರಿಯ ಪತ್ರಕರ್ತಗೆ ಗೌರವಾರ್ಪಣೆ
0
ಆಗಸ್ಟ್ 24, 2022