ಮಲಪ್ಪುರಂ/ಕೊಚ್ಚಿ: ಅಂಗೀಕಾರವಿಲ್ಲದೆ ಕಾರ್ಯಾಚರಿಸುತ್ತಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಪ್ರಾರ್ಥನಾ ಮಂದಿರಗಳನ್ನು ಕೂಡಲೇ ಮುಚ್ಚಬೇಕು ಎಂದು ಮೊನ್ನೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ನ್ಯಾಯಾಲಯದ ತೀರ್ಪನ್ನು ಸಾರ್ವಜನಿಕರು ಮುಕ್ತಕಂಠದಿಂದ ಸ್ವೀಕರಿಸಿದರು. ಮಾರ್ಗಸೂಚಿಗಳನ್ನು ಅನುಸರಿಸದೆ ಪೂಜಾ ಸ್ಥಳಗಳಿಗೆ ಅನುಮತಿ ನೀಡಿದರೆ, ಕೇರಳದ ನಾಗರಿಕರಿಗೆ ವಾಸಿಸಲು ಸ್ಥಳವಿಲ್ಲದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಬಹು ನಿರೀಕ್ಷಿತ ಈ ತೀರ್ಪಿನ ಹಿಂದೆ ಓರ್ವೆಯ ಏಕವ್ಯಕ್ತಿಯ ಹೋರಾಟವೂ ಇದೆ ಎಂಬುದೂ ಬಹುಜನರಿಗೆ ಗೊತ್ತಿರಲಾರದು.
ನ್ಯಾಯಾಲಯದ ತೀರ್ಪಿನ ಹಿಂದೆ ಒಬ್ಬ ಮಹಿಳೆಯ ಸ್ಥೈರ್ಯ ಮತ್ತು ಹೋರಾಟದ ಮನೋಭಾವದ ಕಥೆಯಿದೆ. ನೀಲಂಬೂರ್ ಅಮರಂಬಲಂ ಪಂಚಾಯಿತಿಯ ತೊತೆಕ್ಕಾಡ್ ನಿವಾಸಿ ಆನ್ನೆ ಎಂ.ಜಾರ್ಜ್ ಅವರು ತೀರ್ಪಿಗಾಗಿ ಹೋರಾಡಿದವರು. ಅವರ ಮನೆಯ ಪಕ್ಕದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಲಾದ ಕಟ್ಟಡವು ರಾತ್ರೋರಾತ್ರಿ ಮುಸ್ಲಿಮರ ಪೂಜಾ ಸ್ಥಳವಾಗಿ ಮಾರ್ಪಟ್ಟಿತ್ತು. ಇದರಿಂದ ತನ್ನ ಹಾಗೂ ತನ್ನ ಕುಟುಂಬದ ನೆಮ್ಮದಿ ಕೆಡುತ್ತದೆ ಎಂದು ಮನಗಂಡ ಆನ್ನಿ ಪಂಚಾಯತಿ ಹಾಗೂ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಆದರೆ ಅಲ್ಲಿಂದ ಯಾವುದೇ ಸಹಾಯ ಸಿಕ್ಕಿಲ್ಲ. ನಂತರ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತಾದರೂ ದೂರನ್ನು ಕೈ ಬಿಡಲಾಗಿತ್ತು.
ಬಳಿಕ ಛಲಬಿಡದ ತ್ರಿವಿಕ್ರಮನಂತೆ ಆನ್ನಿ ಸ್ಥಳೀಯ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟವನ್ನು ಪ್ರಾರಂಭಿಸಿದರು. ಸ್ಥಳೀಯ ವಕೀಲರನ್ನು ಸಂಪರ್ಕಿಸಿ ಕಾನೂನು ನೆರವು ಯಾಚಿಸಲಾಗಿತ್ತು. ಆದರೆ ವಕೀಲರು ಅನೇಕ ಜನರ ಪ್ರಭಾವದಿಂದ ಪ್ರಕರಣವನ್ನು ರದ್ದುಗೊಳಿಸಿದರು. ಇದರೊಂದಿಗೆ ಗೃಹಿಣಿ ಅನ್ನಿ ಸೋಲಿನ ಅಂಚಿನಲ್ಲಿದ್ದರೂ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದರು. ಹೊಸ ವಕೀಲರು ಸಿಕ್ಕರು ಮತ್ತು ಹೈಕೋರ್ಟಿನಲ್ಲಿ ಹೋರಾಟ ನಡೆಸಲಾಯಿತು. ಎದುರಾಳಿಗಳ ದಾಳಿ, ಬೆದರಿಕೆ, ಒಂಟಿತನಗಳ ನಡುವೆ ದೈರ್ಯವಾಗಿ ಮೆಟ್ಟಿನಿಂತು ನ್ಯಾಯಕ್ಕಾಗಿ ಹೋರಾಡಿದರು ಅನ್ನಿ ಎನ್ನುತ್ತಾರೆ ಸ್ಥಳೀಯರು. 5 ವರ್ಷಗಳ ಕಾನೂನು ಹೋರಾಟದ ನಂತರ, ನೀಲಂಬೂರು ತೋಟೆಕ್ಕಾಡ್ ಮೂಲದ ಈ ಗೃಹಿಣಿ ಸಾರ್ವಜನಿಕರಿಂದ ಅಗತ್ಯ ಐತಿಹಾಸಿಕ ತೀರ್ಪು ಪಡೆದರು. ಇದೀಗ ಆನ್ನಿ ಎಂ.ಜಾರ್ಜ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಲಾದ ಕಟ್ಟಡ ರಾತ್ರೋರಾತ್ರಿ ಪ್ರಾರ್ಥನಾಲಯವಾಗಿ ಮಾರ್ಪಾಡು: ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು: ಮಾನ್ಯತೆ ಇಲ್ಲದ ಧಾರ್ಮಿಕ ಸಂಸ್ಥೆಗಳನ್ನು ಮುಚ್ಚುವಂತೆ ಹೈಕೋರ್ಟ್ ಆದೇಶದ ಹಿಂದೆ ಒಂಟಿ ಹೆಣ್ಣಿ ಹೋರಾಟ; ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಮಣಿಯದ ಮಹಿಳೆಯ ದೃಢತೆ ಮತ್ತು ಹೋರಾಟದ ಬಗ್ಗೆ ನಿಮಗೆ ಗೊತ್ತೇ?
0
ಆಗಸ್ಟ್ 28, 2022
Tags