ದುಬೈ: ವಿವಿಧ ದೇಶಗಳಿಗೆ ತನ್ನ ವಿಸ್ತರಣೆಯ ಭಾಗವಾಗಿ, ಆಶೀರ್ವಾದ್ ಸಿನಿಮಾಸ್ ದುಬೈನಲ್ಲಿ ಹೊಸ ಕಚೇರಿಯನ್ನು ತೆರೆದಿದೆ.
ಆಶೀರ್ವಾದ್ ಸಿನಿಮಾಸ್ ಯುಎಇಯ ಚಲನಚಿತ್ರ ವಿತರಣಾ ಕಂಪನಿಯಾದ ಫಾರ್ಸ್ ಸಿನಿಮಾಸ್‍ನೊಂದಿಗೆ ಕೈಜೋಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಣೆ ವಿಸ್ತರಿಸುವುದರಿಂದ ದುಬೈ ಮುಖ್ಯ ಕೇಂದ್ರವಾಗಲಿದೆ. ಈ ಬಗ್ಗೆ ಸ್ವತಃ ಮೋಹನ್ ಲಾಲ್ ಅವರೇ ದುಬೈ ಕಚೇರಿ ಉದ್ಘಾಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಮಲಯಾಳಿಗಳ ಸಾರ್ವಕಾಲಿಕ ನೆಚ್ಚಿನ ಚಿತ್ರಗಳಲ್ಲಿ ಒಂದಾದ ನರಸಿಂಹಂ ನಂತರ ಅನೇಕ ಹಿಟ್‍ಗಳನ್ನು ನೀಡಿದ ಆಶೀರ್ವಾದ್ ಸಿನಿಮಾಸ್ ದುಬೈನಲ್ಲಿ ಹೊಸ ಆರಂಭವನ್ನು ಮಾಡಿದೆ. ಆಶೀರ್ವಾದ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ವಿತರಿಸಲು ಗುರಿಯನ್ನು ಹೊಂದಿದೆ.
ಮೋಹನ್ ಲಾಲ್ ದುಬೈಗೆ ಬಂದಾಗ, ಪ್ಯಾನ್-ಇಂಡಿಯನ್ ಚಿತ್ರಕ್ಕೆ ಸಹಿ ಹಾಕಿದ್ದರು. ‘ವೃಷಭ’ ಸಿನಿಮಾದಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಇದನ್ನು ಸ್ವತಃ ಮೋಹನ್ ಲಾಲ್ ಅವರೇ ತಿಳಿಸಿದ್ದಾರೆ.ಮೋಹನ್ ಲಾಲ್ ಅಭಿನಯದ ಮುಂಬರುವ ಚಿತ್ರ 'ಮಾನ್ಸ್ಟರ್'. ಪುಲಿಮುರುಕನ್ ನಂತರ ಮೋಹನ್ ಲಾಲ್ ಚಿತ್ರವನ್ನು ವೈಶಾಖ್ ನಿರ್ದೇಶಿಸುತ್ತಿರುವುದು ಚಿತ್ರದ ದೊಡ್ಡ ಆಕರ್ಷಣೆ. ಮೋಹನ್ ಲಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರವಿದು.
ಆಶೀರ್ವಾದ್ ಸಿನಿಮಾಸ್ ಗೆ ದುಬೈನಲ್ಲಿ ಕಛೇರಿ: ಉದ್ಘಾಟಿಸಿದ ಮೋಹನ್ ಲಾಲ್
0
ಆಗಸ್ಟ್ 28, 2022
Tags