ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಜನಮೈತ್ರಿ ಪೆÇಲೀಸ್ ಕಾಞಂಗಾಡ್ ಮತ್ತು ನೀಲೇಶ್ವರಂ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತ್ರಿವರ್ಣ ಸ್ವಾತಂತ್ರ್ಯ ದಿನಾಚರಣೆ ಸಂದೇಶ ಮೆರವಣಿಗೆ ಕಞಂಗಾಡಿನಲ್ಲಿ ಜರುಗಿತು. ಈ ಸಂದರ್ಭ ನೀಲೇಶ್ವರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್‍ಕ್ಲಬ್ ಅಧ್ಯಕ್ಷ ಪಿ. ರಮೇಶ್ ಕುಮಾರ್ ಅವರು 100 ರಾಷ್ಟ್ರ ಧ್ವಜಗಳನ್ನು ಶಾಲೆಯ ಪ್ರಾಂಶುಪಾಲೆ ಕೆ.ಅನಿತಾ, ಮುಖ್ಯಶಿಕ್ಷಕ ವಿನೋದ್ ಕುಮಾರ್ ಮೇಳತ್ ಅವರಿಗೆ ಹಸ್ತಾಂತರಿಸಿದರು.
ಅಪರ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಧ್ವಜಾರೋಹಣ ನಡೆಸಿದರು. ಈ ಸಂದರ್ಭ ಶಾಲೆಯ ಸಮೀಪದ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಲಾಯಿತು. ಪರಿಸರ ಹೋರಾಟಗಾರ ಪಿ.ಮುರಳೀಧರನ್ ಉಪಸ್ಥಿತರಿದ್ದರು.
ಹೊಸದುರ್ಗ ಪೆÇಲೀಸ್ ಠಾಣೆ ಆವರಣದಲ್ಲಿ ಜನಮೈತ್ರಿ ಪೆÇಲೀಸರ ಪರವಾಗಿ ಸಿಐ ಕೆ.ಶೈನ್ ರಾಷ್ಟ್ರಧ್ವಜ ಸ್ವೀಕರಿಸಿದರು. ಕಾಞಂಗಾಡ್ ಅಗ್ನಿಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ಕೆ.ಸತೀಶ್ ಉಪಸ್ಥಿತರಿದ್ದರು. ಕಾಞಂಗಾಡು ಬಸ್ ನಿಲ್ದಾಣದಲ್ಲಿ ಕಾಞಂಗಾಡ್ ಡಿವೈಎಸ್ಪಿ ಪಿ.ಬಾಲಕೃಷ್ಣನ್ ರ್ಯಾಲಿಯಲ್ಲಿ ಪಾಲ್ಗೊಂಡ ಮಕ್ಕಳೊಂದಿಗೆ ಮಾತನಾಡಿದರು. ರ್ಯಾಲಿನಗರದಾದ್ಯಂತ ಸಂಚರಿಸಿ ಶಾಲಾ ಆವರಣದಲ್ಲಿ ಸಮಾರೋಪಗೊಂಡಿತು. ಎನ್‍ಸಿಸಿ, ಎಸ್‍ಪಿಸಿ, ಸ್ಕೌಟ್, ಗೈಡ್, ರೆಡ್‍ಕ್ರಾಸ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಂತರ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟ ವಿಚಾರ ಸಂಕಿರಣ ನಡೆಯಿತು. ಜಿಲ್ಲಾ ವಾರ್ತಾ ಕಚೇರಿ ಸಹಯೋಗದಲ್ಲಿ ನಡೆದ ವಿಚಾರ ಸಂಕಿರಣವನ್ನು ವಾರ್ತಾ ಅಧಿಕಾರಿ ಎಂ. ಮಧುಸೂಧನ್ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾ ವ್ಯವಸ್ಥಾಪಕ ವೇಣುಗೋಪಾಲನ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಬಾಲನ್ ವಿಷಯ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪಿ. ಅನಿತಾ, ಪ್ರಾಚಾರ್ಯ
ವಿನೋದ್ ಕುಮಾರ್ ಮೇಲತ್, ಜಯನ್ ವೆಳ್ಳಿಕೋತ್ ಉಪಸ್ಥಿತರಿದ್ದರು.