ಕಾಸರಗೋಡು: 'ಸ್ವಂತ ಸೂರಿಲ್ಲದ ಕುಟುಂಬದ ಮಗುವಿಗೊಂದು ಮನೆ'ಎಂಬ ಕಲ್ಪನೆಯೊಂದಿಗೆ 'ಕೂಟ್‍ಕಾರಿಕ್ ಒರು ವೀಡ್'(ಸಂಗಾತಿಗೊಂದು ಮನೆ) ಎಂಬ ಸಿನಿಮಾ ಸಿದ್ಧವಾಗುತ್ತಿದೆ. ವಿನೋದ್ ಕುಮಾರ್ ಜಿಬಿಜಿ ಚಾರಿಟೇಬಲ್ ಫೌಂಡೇಶನ್ ಬ್ಯಾನರ್ ಅಡಿಯಲ್ಲಿ ಡಾ.ವಿನೋದ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಗೋಪಿ ಕುತ್ತಿಕ್ಕೋಲ್ ನಿರ್ದೇಶಿಸುತ್ತಿದ್ದಾರೆ.
ಬಡ ಕುಟುಂಬದ ಮಗುವಿಗೆ ವಾಸ ಯೋಗ್ಯವಾದ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡುವುದು ವಿಶೇಷತೆಯಾಗಿದೆ. ಚಲನ ಚಿತ್ರದ ಚಿತ್ರೀಕರಣ ಪೂರ್ತಿ ಗೊಂಡಾಗ ಬಡ ಮಗುವಿಗೆ ಸುಂದರವಾದ ಮನೆಯ ನಿರ್ಮಾಣಕಾರ್ಯವೂ ಪೂರ್ತಿಯಾಗಲಿದೆ. ಚಿತ್ರೀಕರಣದ ತಯಾರಿ ಕಾಸರಗೋಡಿನಲ್ಲಿ ನಡೆಯುತ್ತಿದೆ. ಚಿತ್ರದ ತಾರಾಗಣವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು. ನಿರಾಶ್ರಿತ ಮಗುವನ್ನು ಗುರುತಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಜಾರಿ
ಚಿತ್ರರಂಗದ ಇತಿಹಾಸದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಕೋಟ್ಯಂತರ ರೂ. ಗಳಿಸಿ, ಲಾಭವನ್ನೇ ದೃಷ್ಟಿಯಲ್ಲಿರಿಸಿ ಸಿನಿಮಾ ತಯಾರಿಸುವವರಿಗೆ
ಈ ಚಿತ್ರದ ನಿರ್ಮಾಪಕರು ಹೊಸ ಸಂದೇಶ ನೀಡಲಿದ್ದಾರೆ. ಈ ಚಿತ್ರದಲ್ಲಿ ಅನೇಕ ಮಕ್ಕಳಿಗೆ ನಟಿಸಲು ಅವಕಾಶ ನೀಡಲಾಗುವುದು. ಏಳರಿಂದ ಪ್ಲಸ್‍ಟು ಒಳಗಿನ ವಿದ್ಯಾರ್ಥಿಗಳಿಗೆ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಡಲಾಗುವುದು. ಶೀಘ್ರ ಆಡಿಶನ್ ನಡೆಯಲಿದ್ದು, ಡಿಸೆಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗೋಪಿ ಕುತ್ತಿಕ್ಕೋಲ್, ಪೆÇ್ರಡಕ್ಷನ್ ಕಂಟ್ರೋಲರ್ ಮಣಿಪ್ರಸಾದ್, ಸಹಾಯಕ ನಿರ್ದೇಶಕಿ ಆರಾಧ್ಯ ರಾಕೇಶ್ ಮತ್ತು ವಿನ್‍ಲಾಲ್ ಉಪಸ್ಥಿತರಿದ್ದರು.
ಯಲ್ಲಿರುವುದಾಗಿ ನಿರ್ಮಾಪಕ ಡಾ. ವಿನೋದ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.---------------------------------------------
ಸ್ವಂತ ಸೂರಿಲ್ಲದ ಮಗುವಿಗೊಂದು ಮನೆ ನಿರ್ಮಿಸಿಕೊಡುವುದರೊಂದಿಗೆ ನಿರ್ಮಾಣಗೊಳ್ಳಲಿದೆ ಸಿನಿಮಾ
0
ಆಗಸ್ಟ್ 11, 2022
Tags